ನಟಿ ಶೃತಿಹಾಸನ್ ಜಾಹಿರಾತಿಗೆ ಬಂದಿದ್ದ ಚಿನ್ನದ ವ್ಯಾಪಾರಿ

andhra-gold-jeweller-manoj-wanted-advt-shruthi-haasan
ಬೆಂಗಳೂರು, ಫೆ.10: ಚಿನ್ನಾಭರಣದ ದುರಾಸೆಗೆ ಬಿದ್ದಿದ್ದ ಕ್ಯಾಬ್ ಡ್ರೈವರಿನಿಂದಲೇ ಭೀಕರವಾಗಿ ಹತ್ಯೆಗೀಡಾದ ಆಂಧ್ರದ ಚಿನ್ನದ ವ್ಯಾಪಾರಿ ಮನೋಜ್ ಕುಮಾರ್ ಗ್ರಂಥಿ ಅವರು ಅಸಲಿಗೆ ಬೆಂಗಳೂರಿಗೆ ಬಂದಿದ್ದಾದರೂ ಏಕೆ?

ಮನೋಜ್ ಕುಮಾರ್ ಅವರ ಆತ್ಮೀಯ ಗೆಳೆಯ ಕಂಕಟಾಲಾ ಮಲ್ಲಿಕ್ ಅವರ ಮಾತುಗಳಲ್ಲೇ ಕೇಳಿ:
ವಿಶಾಖಪಟ್ಟಣದ ವೈಭವದ ವೈಭವ್ ಎಂಪೈರ್ ಜ್ಯುವೆಲರ್ಸ್ ಅಂಗಡಿಯ ಮಾಲೀಕ ಮನೋಜ್ ಗೆ ಬೆಂಗಳೂರಿನಲ್ಲಿಯೂ ಒಂದು ಜ್ಯುವೆಲರ್ಸ್ ಅಂಗಡಿ ಪ್ರಾರಂಭಿಸುವ ಉದ್ದೇಶವಿತ್ತು. ಅದಕ್ಕೆ ಅಂಗಡಿ ತಲಾಶೆಗಾಗಿ ಬಂದಿದ್ದರು. ಅದಾದ ನಂತರ ಬುಧವಾರ ಬೆಳಗ್ಗೆ 10 ಗಂಟೆಗೆ ಕಿಂಗ್ ಫಿಶರ್ ಏರ್ ಲೈನ್ಸ್ ವಿಮಾನದ ಮೂಲಕ ಮುಂಬೈಗೆ ತೆರಬೇಕಿತ್ತು.

ತಮ್ಮ ಚಿನ್ನಾಭರಣ ವ್ಯಾಪಾರಕ್ಕಾಗಿ ಮುಂಬೈನಲ್ಲಿ ಜಾಹಿರಾತು ಚಿತ್ರೀಕರಣದಲ್ಲಿ ಮನೋಜ್ ಪಾಲ್ಗೊಳ್ಳಬೇಕಿತ್ತು. ಫೆ. 17ರಂದು ನಿಗದಿಯಾಗಿದ್ದ ಜಾಹಿರಾತು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ನಟಿ ಶೃತಿಹಾಸನ್ ಕಾಲ್ ಷೀಟ್ ನೀಡಿದ್ದರು. ಜಾಹಿರಾತಿನಲ್ಲಿ ಬಳಸಲು ಜೈಪುರದಿಂದ ವಿಶೇಷ ಚಿನ್ನಾಭರಣ ಖರೀದಿಸಿದ್ದರು. ಅದನ್ನು ಮೂರು ಚೀಲಗಳಲ್ಲಿ ತುಂಬಿಕೊಂಡು ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ಮಾರ್ಗ ಮಧ್ಯೆ ... ಎಂದು ಮಲ್ಲಿಕ್ ಗದ್ಗತಿತರಾದರು.

ಮನೋಜ್ ಗೆ ಮೂವರು ಪುತ್ರಿಯರಿದ್ದಾರೆ. ದೊಡ್ಡ ಮಗಳು ಡೆಂಟಲ್ ಓದುತ್ತಿದ್ದಾಳೆ. ಕೊನೆಯ ಮಗು ಎರಡನೆಯ ತರಗತಿಯಲ್ಲಿದ್ದಾಳೆ ಎಂದು ಮನೋಜ್ ಸೋದರ ಅಮರೇಂದ್ರ ಕುಮಾರ್ ಹೇಳಿದ್ದಾರೆ.

ಮನೋಜ್ ದೇಹವನ್ನು ವಿಶಾಖಪಟ್ಟಣಕ್ಕೆ ತೆಗೆದುಕೊಂಡ ಹೋಗಲಾಗಿದೆ. ಅಲ್ಲಿ ವೈಭವ್ ಷೋರೂಂ ಎದುರು ಶುಕ್ರವಾರ ಆಪ್ತ ಬಂಧುಗಳು, ಉದ್ಯೋಗಿಗಳ ದರುಶನಕ್ಕೆ ಇಡಲಾಗುವುದು. ಬಳಿಕ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+