ಕರ್ತವ್ಯ ನಿಷ್ಠೆ, ಮಾನವೀಯತೆ ಅಂದ್ರೆ ಇದೇ ಕಣ್ರಿ!
ಚೆನ್ನೈ,ಫೆ.10:
ಪಚ್ಚಯ್ಯಪ್ಪ ಕಾಲೇಜಿನ ಅರಿವುಗೇಡಿ ವಿದ್ಯಾರ್ಥಿಗಳು ನಗರದಲ್ಲಿ ಬಸ್ ದಿನಾಚರಣೆ (ಬಸ್ ಡೇ) ಆಚರಿಸಲು ಅವಕಾಶ ನೀಡಲಿಲ್ಲ ಎಂದು ಸಿಟ್ಟುಗೆದ್ದು ಗುರುವಾರ ದಾಂಧಲೆ ಎಬ್ಬಿಸಿದರು. ಅಣ್ಣಾ ಕಮಾನು ಬಳಿ ಪೊಲೀಸ್ ಜೀಪು ಮತ್ತು ನಗರ ಸಂಚಾರ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಬಿಗಿ ಕ್ರಮ ಕೈಗೊಂಡ ಪೊಲೀಸರು 12 ಮಂದಿಯನ್ನು ಬಂಧಿಸಿದರು. id="toptextpromo">ವಿದ್ಯಾರ್ಥಿಗಳು
ಬಸ್ ದಿನಾಚರಣೆ ಮಾಡಿದರೆ ಟ್ರಾಫಿಕ್ ಜಾಮ್ ಆಗುತ್ತದೆ. ಇತರೆ ಪ್ರಯಾಣಿಕರಿಗೆ ಅನಗತ್ಯ ತೊಂದರೆಯಾಗುತ್ತದೆ. ಜತೆಗೆ ವಿದ್ಯಾರ್ಥಿಗಳು ಬಸ್ ಡೇ ಹೆಸರಿನಲ್ಲಿ ಬಸ್ ಟಾಪ್ ಮೇಲೆಲ್ಲ ಪ್ರಯಾಣಿಸುತ್ತಾರೆ. ಮಹಿಳಾ ಪ್ರಯಾಣಿಕರ ಜತೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ ಎಂದು ಪೊಲೀಸರು ಅವಕಾಶ ನಿರಾಕರಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಆದರೆ
ವಿಷಯ ಅದಲ್ಲ. ಏನಪಾ ಅಂದ್ರೆ ... ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೊಲೀಸರು ಮಗುವನ್ನು ರಕ್ಷಿಸಿ, ತಾಯಿಗೆ ಸುರಕ್ಷಿತವಾಗಿ ಒಪ್ಪಿಸುವ ಮೂಲಕ ಮಾನವೀಯತೆ ತೋರುತ್ತಾ, ತಮ್ಮ ಕರ್ತವ್ಯ ನಿಷ್ಠೆ ಮೆರೆದರು. ಹ್ಯಾಟ್ಸ್ ಆಫ್ ಟು ಚೆನ್ನೈ ಪೊಲೀಸ್. ಇದು ಪದಗಳಿಗೆ
ನಿಲುಕದ್ದು,
ಒಮ್ಮೆ
ಚಿತ್ರ
ನೋಡಿ!
ಅಂದ
ಹಾಗೆ,
ಇದನ್ನು
ಕ್ಲಿಕ್ಕಿಸಿದ
ಫೋಟೋಗ್ರಾಫರಿಗೂ
ಧನ್ಯವಾದ
ಹೇಳೋಣ!












Click it and Unblock the Notifications