ಬಿಎಂಟಿಸಿ ವಾಯು ವಜ್ರ ಪ್ರಯಾಣ ದರ ದುಬಾರಿ
ಬೆಂಗಳೂರು,
ಫೆ.10: ನಗರದಲ್ಲಿ ಬಿಎಂಟಿಸಿ 'ವಾಯು ವಜ್ರ' ಪ್ರಯಾಣ ದರವನ್ನು ಸದ್ದಿಲ್ಲದೇ ಹೆಚ್ಚಿಸಲಾಗಿದೆ. ಅತ್ತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (BIAL) ಹೋಗುವ ಮಾರ್ಗದಲ್ಲಿ ಸದರಹಳ್ಳಿ ಗೇಟಿನ ಬಳಿ ಟೋಲ್ ಪಾವತಿ ಕಡ್ಡಾಯಗೊಳಿಸಿರುವುದೇ ಇದಕ್ಕೆ ಕಾರಣವಾಗಿದೆ. id="toptextpromo">ಬಿಎಂಟಿಸಿ
ಬಸ್ ಸರಕಾರಿ ಬಸ್ಸಾಗಿದ್ದರೂ ಅದು ವಾಣಿಜ್ಯಿಕವಾಗಿ ಬಳಕೆಯಾಗುತ್ತಿರುವುದರಿಂದ ಟೋಲ್ ದರದಿಂದ ಅದಕ್ಕೆ ವಿನಾಯಿತಿ ನೀಡಲಾಗಿಲ್ಲ. ಆದ್ದರಿಂದ ವಿಮಾನ ನಿಲ್ದಾಣದತ್ತ ಸಾಗುವ ಬಿಎಂಟಿಸಿ ವಜ್ರ ಬಸ್ಸಿನಲ್ಲಿ ಪ್ರಯಾಣಿಸಬೇಕೆಂದರೆ 5 ರುಪಾಯಿ ಹೆಚ್ಚಿಗೆ ಪಾವತಿಸಬೇಕಾಗಿದೆ. id='are-slot-1' class='oiad oi-axt oiadv'> id='top-searched-articles'>ಟೋಲ್
ದರ ಜಾರಿಯಿಂದ ಬಿಎಂಟಿಸಿ ಸಂಸ್ಥೆಗೆ ಪ್ರತಿ ದಿನ ಒಟ್ಟು 30,000 ಹೆಚ್ಚುವರಿ ಹೊರೆ ಬೀಳಲಿದೆ. ಆದ್ದರಿಂದ ಅನಿವಾರ್ಯವಾಗಿ ಈ ಹೊರೆಯನ್ನು ಪ್ರಯಾಣಿಕನ ಮೇಲೆ ಹೊರಿಸಲಾಗಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ. ಇನ್ನು, ಹವಾನಿಯಂತ್ರಣ ವ್ಯವಸ್ಥೆಯಿಲ್ಲದ (AC) ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವವರು 1 ರುಪಾಯಿಯನ್ನು ಹೆಚ್ಚಿಗೆ ತೆರಬೇಕಾಗುತ್ತದೆ. ಇದೇ ಪ್ರಮಾಣದಲ್ಲಿ ಮಾಸಿಕ ಮತ್ತು ದೈನಂದಿನ ಪಾಸ್ ದರಗಳನ್ನು ಸಹ ಹೆಚ್ಚಿಸಲಾಗಿದೆ.











Click it and Unblock the Notifications