ಬಿಜೆಪಿ ಬ್ಲೂ ಫಿಲಂ: ರಾಜ್ಯಪಾಲ ಭಾರದ್ವಾಜ್ ಏನನ್ನುತ್ತಾರೆ?
ಬೆಂಗಳೂರು,ಫೆ.9:
ರಾಜ್ಯ ಆಡಳಿತಾರೂಢ ಬಿಜೆಪಿಯ ಆಂತರಿಕ ವಿಷಯಗಳಲ್ಲಿ ಸದಾ ಮೂಗು ತೂರಿಸುತ್ತಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಈ ಬಾರಿ ವಿಧಾನಸಭೆಯಲ್ಲೇ ಬ್ಲೂ ಫಿಲಂ ನೋಡಿ ಸಿಕ್ಕು ಬಿದ್ದ ಬಿಜೆಪಿ ಮೂವರು ಸಚಿವರ ಪ್ರಕರಣದಲ್ಲಿ ಏನನ್ನುತ್ತಾರೆ? ಮತ್ತೆ ವಿವಾದವೆಬ್ಬಿಸುತ್ತಾರಾ? ಎಂಬ ಕುತೂಹಲ ಮನೆಮಾಡಿತ್ತು. ಆದರೆ ಭಾರದ್ವಾಜ್ ಅದಕ್ಕೆಲ್ಲ ತಣ್ಣೀರು ಎರಚಿದ್ದಾರೆ. id="toptextpromo">ವಿಧಾನಸೌಧ
ಬ್ಲೂ ಫಿಲಂ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿಯ ಮೂವರು ಸಚಿವರ ಪ್ರಕರಣದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಭಾರದ್ವಾಜ್ ಮಗುಮ್ಮಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಈ
ಮಾಜಿ ಸಚಿವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಸ್ಪೀಕರ್ ಅವರಿಗೆ ಇದೆ. ಇದು ಸ್ಪೀಕರ್‌ಗೆ ಬಿಟ್ಟು ವಿಚಾರ. ಇದರಲ್ಲಿ ನಾನು ತಲೆ ಹಾಕುವಂತಿಲ್ಲ. ಇದು ನನ್ನ ವ್ಯಾಪ್ತಿಗೂ ಬರುವುದಿಲ್ಲ. ಬ್ಲೂ ಫಿಲಂ ನೋಡಿದ ಮೂವರು ಬಿಜೆಪಿ ಸಚಿವರು ನೀಡಿದ ರಾಜೀನಾಮೆಯನ್ನು ನಾನು ತಕ್ಷಣ ಅಂಗೀಕರಿಸಿಯಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.











Click it and Unblock the Notifications