ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ ಕಾಲೊನಿಯಲ್ಲಿ ಬೆಂ.ಪೊಲೀಸರು ಮಾಡಿದ್ದೇನು?

By Srinath
|
Google Oneindia Kannada News

bidar-irani-colony-thieves-caught-by-bangalore-police
ಬೆಂಗಳೂರು,ಫೆ.7: ಬೀದರ್‌ ಇರಾನಿ ಕಾಲೊನಿ ಈಗ ಕುಖ್ಯಾತಿಗೆ ಬಂದಿದೆ. ಇದ್ಯಾವ ಇರಾನಿ ತಂಡವಪ್ಪಾ. ಇದು ಕ್ರಿಕೆಟಿಗೆ ಸಂಬಂಧಪಟ್ಟಿದ್ದೋ ಅಂತ ಸುಮ್ಮನಾಗಬೇಡಿ. ಏಕೆಂದರೆ ಇವರು ಖತರನಾಕ್ ಪಂಗಡದವರು. ಬೆಂಗಳೂರು ನಗರವಾಸಿಗಳು ಸ್ವಲ್ಪ ಹೆಚ್ಚೇ ಜಾಗೃತರಾಗಿರಬೇಕು ಇವರ ಬಗ್ಗೆ. ಇವರದು ಪುರಾತನ, ಪಳಗಿದ ಪಾತಕ ತಂಡ.

ಬೀದರಿನಲ್ಲಿ ಇವರದೇ ಪ್ರತ್ಯೇಕ ಬಡಾವಣೆಯಿದೆ. ಅದರ ಹೆಸರೇ ಇರಾನಿ ಕಾಲೊನಿ. ತಂಡವು ಬೆಂಗಳೂರಿನಲ್ಲಿ ದೋಚಿದ್ದನ್ನು ಇಲ್ಲಿ ಬಚ್ಚಿಡುತ್ತಿದ್ದರು. ಇಂತಿಪ್ಪ ತಂಡದ ಹೆಸರೇ ಬೀದರ್ ಇರಾನಿ ತಂಡ. ಆ ತಂಡದ ಸದಸ್ಯರು ಬೆಂಗಳೂರಿನಲ್ಲಿ ವೃದ್ಧರು ಮತ್ತು ಮಹಿಳೆಯರ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ದೋಚುವುದನ್ನು ಕಸುಬಾಗಿಸಿಕೊಂಡಿದ್ದಾರೆ. ಆದರೆ ಇಂತಿಪ್ಪ 36 ಮಂದಿಯ ತಂಡವನ್ನು ನಗರದ ಪಶ್ಚಿಮ ವಿಭಾಗದ ಪೊಲೀಸರು ಕಳೆದ ವಾರ ತಮ್ಮ ವಶಕ್ಕೆ ಪಡೆದಿದ್ದಾರೆ.

ಬೀದರ್‌ ಇರಾನಿ ತಂಡದ ಕಾರ್ಯಾಚರಣೆ ಹೇಗೆ?: ವೃದ್ಧರು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ತಂಡದ ಸದಸ್ಯರು ಕೃತ್ಯ ಎಸಗುತ್ತಾರೆ. ಪೊಲೀಸರೆಂದು ಪರಿಚಯಿಸಿಕೊಳ್ಳುತ್ತಾರೆ. ತಕ್ಷಣ, 'ಅಲ್ಲೊಂದು ಕೊಲೆಯಾಗಿದೆ, ಆದ್ದರಿಂದ ಆಭರಣಗಳನ್ನು ಬಿಚ್ಚಿಟ್ಟುಕೊಳ್ಳಿ' ಎಂದು ಹೇಳಿ ಆಭರಣ ಬಿಚ್ಚಿಸಿಕೊಳ್ಳುತ್ತಾರೆ. ನಂತರ ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪೇಪರ್‌ನಲ್ಲಿ ಸುತ್ತಿಕೊಟ್ಟಂತೆ ನಾಟಕವಾಡಿ ಆಭರಣ ದೋಚುತ್ತಾರೆ.

ಮತ್ತೊಂದು ವಿಧಾನ: ಮಹಿಳೆಯರು ಗಲ್ಲಾ ಮೇಲೆ ಕುಳಿತಿರುವ ಅಂಗಡಿಯನ್ನು ಗುರುತಿಸುತ್ತಾರೆ. ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಅಲ್ಲಿಗೆ ಹೋಗುತ್ತಾರೆ. 500 ರೂಪಾಯಿ ನೋಟು ನೀಡಿ ಇದನ್ನು ನಿಮ್ಮ ಚಿನ್ನದ ಸರಕ್ಕೆ ಮುಟ್ಟಿಸಿಕೊಟ್ಟರೆ ನಮಗೆ ಒಳಿತಾಗುತ್ತದೆ ಎಂದು ಹೇಳುತ್ತಾರೆ. ಆ ನಂತರ ಸರ ಕಿತ್ತುಕೊಂಡು ಪರಾರಿಯಾಗುತ್ತಾರೆ.

English summary
The Bangalore police raided the Bidar Irani colony on Feb 4th at 2 am as the residents of that colony were looting bangaloreans. 36 people of that colony were taken into custody at that time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X