ಯಥಾ ಮುಖ್ಯಮಂತ್ರಿ ತಥಾ ಮಂತ್ರಿ

ಮೊನ್ನೆ ಮಲ್ಪೆ ಬೀಚಿನಲ್ಲಿ ನಡೆದ ಬಹಿರಂಗ ಕಾಮಕೇಳಿಯನ್ನು ಮುಖ್ಯಮಂತ್ರಿ ಸದಾನಂದಗೌಡರು ಬಲವಾಗಿ ಸಮರ್ಥಿಸಿಕೊಂಡಿದ್ದರು. ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಮಲ್ಪೆ ಬೀಚಿನಲ್ಲಿ ವಿದೇಶಿಯರಿಗೆ ನಂಗಾನಾಚ್ ಮಾಡುವುದಕ್ಕೆ ಅವಕಾಶ ನೀಡುವುದು ತಪ್ಪೇನೂ ಇಲ್ಲ ಅಂದಿದ್ದರು. ಬಹುಶಃ ತಮ್ಮ ಅಧಿನಾಯಕ ಸದಾನಂದ ಗೌಡರೇ ಹೀಗೆ ಅಶ್ಲೀಲತೆಗೆ ಮಣೆ ಹಾಕಿರುವಾಗ ತಮಗೆ ಇನ್ನು ಯಾರ ಅಡೆತಡೆಯೂ ಇಲ್ಲ ಎಂದು ಭಾವಿಸಿ ಸಚಿವ ಸವದಿ ಇಂತಹ ದುಸ್ಸಾಹಸಕ್ಕೆ ಕೈಹಾಕಿದರಾ? ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.
ಈ ಮಧ್ಯೆ, ಆದಷ್ಟೂ ಯಾವುದೇ ಹಗರಣಗಳಿಗೆ ಅವಕಾಶ ನೀಡದೆ ಉತ್ತಮ ಆಡಳಿತ ನೀಡುವ ಸಂಕಲ್ಪ ತೊಟ್ಟಿರುವ ಮುಖ್ಯಮಂತ್ರಿ ಸದಾನಂದ ಗೌಡರು ತಮ್ಮ ಇಬ್ಬರು ಸಚಿವರು ವಿಧಾನಸೌಧದಲ್ಲೇ ರಾದ್ದಾಂತ ಎಬ್ಬಿಸಿರುವ ಬಗ್ಗೆ ಕೆಂಡಾಮಂಡಲವಾಗಿದ್ದಾರೆ ಎನ್ನಲಾಗಿದೆ.
ಈ ಕ್ಷಣದವರೆಗೂ ಅವರಿನ್ನೂ ಸವದಿ ಲೈಂಗಿಕ ಪುರಾಣದ ಬಗ್ಗೆ ಏನನ್ನೂ ಹೇಳಿಲ್ಲವಾದರೂ ಹಿರಿಯ ಸಚಿವರ ಸಭೆ ನಡೆಸಿದ್ದು, ಸವದಿ ಮತ್ತು ಪಾಟೀಲ್ ಜೋಡಿಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಅಂದರೆ ಇಬ್ಬರಿಂದ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications