ವಿಧಾನಸಭೆಯಲ್ಲಿ ಅಶ್ಲೀಲಚಿತ್ರ:ಸಚಿವ ಸವದಿ ರಾಜೀನಾಮೆ?

ಪ್ರಕರಣವು ರಾಜ್ಯಾದ್ಯಂತ ತೀವ್ರ ಸಂಚಲನವನ್ನುಂಟು ಮಾಡಿದ್ದು, ಸಚಿವ ಸವದಿ ಯಾವುದೇ ಕ್ಷಣ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಸಚಿವ ಲಕ್ಷ್ಮಣ ಸವದಿ ಅಶ್ಲೀಲ ಚಿತ್ರ ವೀಕ್ಷಣೆ ನ್ಯೂಸ್ ಚಾನೆಲ್ ಗಳಲ್ಲಿ ಬಿತ್ತರವಾಗುತ್ತಿದ್ದಂತೆ ವಿರೋಧ ಪಕ್ಷಗಳೂ ಸೇರಿದಂತೆ ಬಹುತೇಕ ಎಲ್ಲ ದಿಕ್ಕುಗಳಿಂದ ಅವರ ರಾಜೀನಾಮೆಗೆ ಆಗ್ರಹಿಸಲಾಗುತ್ತಿದೆ. ಬುಧವಾರ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸುವ ಸಾಧ್ಯತೆಗಳೂ ಇವೆ.
'ಒನ್ ಇಂಡಿಯಾ ಕನ್ನಡ'ಕ್ಕೆ ಒಂದೇ ಸಮನೆ ಇಮೇಲ್ ಗಳು ಹರಿದುಬರುತ್ತಿವೆ. ಜನ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾಚಿಕೆ....ನಾಚಿಕೆ... ಕರ್ನಾಟಕ ಜನರಿಗೆ ನಾಚಿಕೆ. ದಯವಿಟ್ಟು ಈ ಸರಕಾರ ತೊಲಗಲಿ. ಯಾವ ಘನ ಕಾರ್ಯಕ್ಕಾಗಿ ಈ ಸರಕಾರ ಇರಬೇಕು? ಹಾಲಪ್ಪ, ರೇಣುಕಾಚಾರ್ಯ, ಯಡಿಯೂರಪ್ಪ, ಮಲ್ಪೆ ಬೀಚ್ ಹಗರಣ, ಸಿಂಧಗಿ ಪ್ರಕರಣ, ಈಗ ಮತ್ತೊಬ್ಬ ಸಚಿವರ ಘನಕಾರ್ಯ ಸದನದಲ್ಲಿ. ಛೆ. ನಾಚಿಕೆಗೇಡು ಎನ್ನುತ್ತಿದ್ದಾರೆ.












Click it and Unblock the Notifications