ಕೋರ್ಟ್ ಕೇಸ್ ಮುಗಿಯೋ ತನಕ ಸಿಎಂ ಪಟ್ಟ ಇಲ್ಲ

ಸೋಮವಾರ ವಿಧಾನಮಂಡಲ ಕಲಾಪದ ಸಂದರ್ಭದಲ್ಲಿ ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಆಪ್ತರ ಜೊತೆ ಗುಸುಗುಸು ಪಿಸುಪಿಸು ನಡೆಸಿದ್ದ ಯಡಿಯೂರಪ್ಪ ಅವರ ಮೇಲೆ ಬಿಜೆಪಿ ಹೊಸ ಪ್ರಯೋಗ ಮಾಡುತ್ತಿದೆ.
ನಿತಿನ್ ಗಡ್ಕರಿ, ಕೆಎಸ್ ಈಶ್ವರಪ್ಪ, ಸಿಎಂ ಸದಾನಂದ ಗೌಡ, ಜಗದೀಶ್ ಶೆಟ್ಟರ್, ಎಚ್ ಎನ್ ಅನಂತ್ ಕುಮಾರ್, ಸಂತೋಷ್, ವಿ ಸತೀಶ್ ಅವರಿದ್ದ ಸಭೆಯಲ್ಲಿ ಯಡಿಯೂರಪ್ಪ ಕೂಡಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಹೊರಬಿದ್ದ ಸೂಚನೆ ಇಂತಿದೆ...
1. ಪಕ್ಷದಲ್ಲಿನ ಆಂತರಿಕ ಕಚ್ಚಾಟಕ್ಕೆ ಮುಕ್ತಾಯ ಹಾಡಬೇಕು. ಐಕ್ಯತೆ ಮೆರೆಯಬೇಕು.
2. ವಿವಾದಿತ ಹೇಳಿಕೆ ಕೊಡುವುದನ್ನು ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು ನಿಲ್ಲಿಸಬೇಕು.
3. ಪಕ್ಷದ ಗೌರವಕ್ಕ ಚ್ಯುತಿ ಬರುವಂತೆ ನಡೆದುಕೊಳ್ಳುವುದು ಅಥವಾ ಹೇಳಿಕೆ ನೀಡದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.
4. ಪಕ್ಷ ಹಾಗೂ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಅಭಿಪ್ರಾಯ ಕೇಳಬೇಕು.
5. ರಾಜ್ಯ ಪ್ರವಾಸದ ಸಂದರ್ಭದಲ್ಲಿ ಶಾಸಕರು ಹಾಗೂ ಸಂಸದರು ಒಗ್ಗೂಡಿಕೊಂಡು ಯಡಿಯೂರಪ್ಪ ಅವರ ಜೊತೆ ನಡೆಯಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಹಾಗೂ ಆರೆಸ್ಸೆಸ್ ಮುಖಂಡರು ನೀಡಿರುವ ಮತ್ತೊಂದು ಮಹತ್ವದ ಸೂಚನೆ ಯಡಿಯೂರಪ್ಪ ಅವರ ಹಣೆ ಮೇಲೆ ಯೋಚನಾರೇಖೆ ಮೂಡಿಸಿದೆ.
ಯಡಿಯೂರಪ್ಪ ಅವರು ತಮ್ಮ ಮೇಲೆ ಬಂದಿರುವ ಆರೋಪಗಳನ್ನು ಕಳೆದುಕೊಳ್ಳಬೇಕು. ಕಳಂಕಿತರಿಗೆ ಯಾವ ಸ್ಥಾನವನ್ನು ಬಿಜೆಪಿ ನೀಡುವುದಿಲ್ಲ. ಯಡಿಯೂರಪ್ಪ ಅವರು ಸಮರ್ಥ ನಾಯಕರಾಗಿದ್ದು, ತಾಳ್ಮೆಯಿಂದ ಪಕ್ಷದ ಆದೇಶ ಪಾಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ವರಿಷ್ಠರು ಹೇಳಿದ್ದಾರೆ.












Click it and Unblock the Notifications