ಉಡುಪಿ ರೇವ್ ಪಾರ್ಟಿ ಮೇಲೆ ಕ್ರಮಕ್ಕೆ ಸರ್ಕಾರ ಸೂಚನೆ

ಸ್ಪ್ರಿಂಗ್ ಜೌಕ್ ಎಂಬ ಹೆಸರಿನಲ್ಲಿ ವಿದೇಶಿ ಸಂಸ್ಕೃತಿ ಪರಿಚಯಿಸುವ ಮೂರು ದಿನಗಳ ರೇವ್ ಪಾರ್ಟಿ ವಿರುದ್ಧ ವಿಪಕ್ಷಗಳು, ಸ್ವಾಮೀಜಿಗಳು ದನಿಯೆತ್ತಿದ ನಂತರ ಸದಾನಂದ ಗೌಡರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ರೇವ್ ಪಾರ್ಟಿ ಬಗ್ಗೆ ಜಿಲ್ಲಾಧಿಕಾರಿ ಎಂಟಿ ರೇಜು ಅವರನ್ನು ಸ್ಪಷ್ಟನೆ ಕೇಳಲಾಗಿದೆ. ಅವರಿಂ ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸುತ್ತೇವೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಎಂದು ಸದಾನಂದ ಗೌಡರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉಲ್ಟಾ ಹೊಡೆದ ಡಿಸಿ: ಮಾಧ್ಯಮಗಳು ಪ್ರಸಾರ ಮಾಡಿದಂಥ ಘಟನೆಗಳು ನಡೆದಿಲ್ಲ. ಇಲ್ಲಿ ನಡೆದಿರುವುದೆಲ್ಲವೂ ಸರಿಯಾಗಿದೆ. ಐಲ್ಯಾಂಡ್ ಉತ್ಸವ ಅಶ್ಲೀಲ ಸಂಸ್ಕೃತಿಗೆ ಉತ್ತೇಜನ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ರೇಜು ಸಮರ್ಥಿಸಿಕೊಂಡಿದ್ದರು.
ಸಮರ್ಥಿಸುತ್ತಿದ್ದಾರೆಂಬ ಆರೋಪಗಳೂ ಕೇಳಿ ಬಂದಿವೆ.
ಜಿಲ್ಲಾಡಳಿತ ಸಂಸ್ಕೃತಿ ಹೆಸರಲ್ಲಿ ಅಶ್ಲೀಲ ಸಂಸ್ಕೃತಿಗೆ ಉತ್ತ್ತೇಜನ ನೀಡಿದೆ.ನಂಗಾನಾಚ್ ಉತ್ಸವವನ್ನು ಸಮರ್ಥಿಸುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪ್ರದಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಜೆಡಿಎಸ್ ನ ಎಂಜಿ ಹೆಗ್ಡೆ ಮುಂತಾದವರು ಆಗ್ರಹಿಸಿದ್ದಾರೆ.












Click it and Unblock the Notifications