ವಿಕಲಚೇತನರಿಗೆ ವಿಶೇಷ ಉದ್ಯೋಗ ನೀಡಿದ ವಿಪ್ರೋ

ಮೈಸೂರಿನಲ್ಲಿರುವ ವಿಪ್ರೋ ಗ್ಲೋಬಲ್ ಸರ್ವೀಸ್ ಮ್ಯಾನೇಜ್ಮೆಂಟ್ ಕೇಂದ್ರಕ್ಕೆ ಈ ಆರು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು BITS ಪಿಲಾನಿಯಲ್ಲಿ ಪಡೆಯುವ ಅಪೂರ್ವ ಅವಕಾಶ ಒದಗಿಸಲಾಗಿದೆ.
ವಿಪ್ರೋ ಸಂಸ್ಥೆಯಲ್ಲಿ ಸುಮಾರು 300 ಜನ ವಿಕಲಚೇತನರು ಉದ್ಯೋಗಿಗಳು ಇದ್ದಾರೆ. ಅದರೆ, ಇದೇ ಮೊದಲ ಬಾರಿಗೆ ವಿಕಲಚೇತನ ವಿದ್ಯಾರ್ಥಿಗಳನ್ನು ವಿಪ್ರೋ ಅಕಾಡೆಮಿ ಫಾರ್ ಸಾಫ್ಟ್ ವೇರ್ ಎಕ್ಸಲೇನ್ಸ್(WASEWASE ) ವ್ಯವಸ್ಥೆಗೆ ಒಳಪಡಿಸಲಾಗುತ್ತಿದೆ.
ಬಿಎಸ್ಸಿ, ಬಿಸಿಎ ಹಾಗೂ ಬಿಸಿಎಂ ಪದವಿಧರ ಉದ್ಯೋಗಿಗಳಿಗೆ ಬಿಟ್ಸ್ ಪಿಲಾನಿಯಲ್ಲಿ ಎಂಎಸ್ ಕೋರ್ಸ್ ಪಡೆಯುವ ಅವಕಾಶವನ್ನು ವಿಪ್ರೋ ಸಂಸ್ಥೆ ಒದಗಿಸುತ್ತದೆ.
ಈಗ Nishನ ವಿದ್ಯಾರ್ಥಿಗಳಿಗೂ ಈ ಸೌಲಭ್ಯವನ್ನು ನೀಡಲಾಗುತ್ತಿದ್ದು, ಅವರಿಗೂ ಸ್ಟೈಪೆಂಡ್ ನೀಡಲಾಗುತ್ತದೆ ಎಂದು ವಿಪ್ರೋ ಯೋಜನೆಯ ವ್ಯವಸ್ಥಾಪಕ ಅನ್ನಿಸ್ ಜೋಸೆಫ್ ಹೇಳಿದ್ದಾರೆ.
ತಂತ್ರಜ್ಞಾನ ಹಾಗೂ ಇಂಗ್ಲೀಷ್ ಭಾಷಾ ವಿಷಯದ ಸಂದರ್ಶನ ನಡೆಸಿ ಆರು ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಎರಡು ವಾರಗಳಲ್ಲಿ ವಿಪ್ರೋ ಸಂಸ್ಥೆ ಸೇರುವ ಅವಕಾಶ ನೀಡಲಾಗಿದೆ ಎಂದು Nish ನ ವ್ಯವಸ್ಥಾಪಕ ನಿರ್ದೇಶಕ ಸ್ಯಾಮುಯಲ್ ಮ್ಯಾಥ್ಯೂ ಹೇಳಿದ್ದಾರೆ.












Click it and Unblock the Notifications