ವಿಶ್ವಖ್ಯಾತ ಸ್ಟಾರ್ ಬಕ್ಸ್ ಕಾಫಿ ಭಾರತಕ್ಕೆ ಪ್ರವೇಶ

Posted By:
Subscribe to Oneindia Kannada
Starbucks Coffee in India

ನವದೆಹಲಿ, ಜ.31: ವಿಶ್ವಪ್ರಸಿದ್ಧ ಕಾಫಿ ಕಂಪನಿ ಸ್ಟಾರ್ ಬಕ್ಸ್ ಭಾರತಕ್ಕೆ ಕಾಲಿರಿಸುತ್ತಿದೆ. ಟಾಟಾ ಗ್ಲೋಬಲ್ ಬ್ರಿವೆರೆಜರ್ಸ್ ಲಿ ಜೊತೆ 50:50 ರ ಅನುಪಾತದ ಜಂಟಿ ಒಪ್ಪಂದಕ್ಕೆ ಸ್ಟಾರ್ ಬಕ್ಸ್ ಮುಂದಾಗಿದೆ.

ಟಾಟಾ ಮೈತ್ರಿ ಕೂಟದಲ್ಲಿ ಸ್ಟಾರ್ ಬಕ್ಸ್ ಸೇರಿದ ಮೇಲೆ ಸುಮಾರು 30 ರಿಂದ 50 ಮಳಿಗೆಗಳನ್ನು ಮೊದಲ ಹಂತದಲ್ಲಿ ಆರಂಭಿಸುವ ನಿರೀಕ್ಷೆಯಿದೆ. ಈ ಜಂಟಿ ಯೋಜನೆಗೆ ಸುಮಾರು 400 ಕೋಟಿ ರು.ಗೂ ಅಧಿಕ ಮೊತ್ತ ಹೂಡಲಾಗಿದೆ.

ಈ ಜಂಟಿ ಒಪ್ಪಂದ ಸುದ್ದಿ ಹೊರಬೀಳುತ್ತಿದ್ದಂತೆ ಟಾಟಾ ಕಾಫಿ ಷೇರುಗಳು ಶೇ 9.49 ರಷ್ಟು ಏರಿಕೆ ಕಂಡಿದೆ. ನ್ಯಾಸ್ಡಾಕ್ ನಲ್ಲಿ ಸ್ಟಾರ್ ಬಕ್ಸ್ ಶ್ಃಏರುಗಳು ಕೂಡಾ ಶೇ 1.32ರಷ್ಟು ಏರಿಕೆಯಾಗಿದೆ.

ಈ ಒಪ್ಪಂದದ ಜೊತೆಗೆ ತನ್ನ ಟೀ ಉತ್ಪನ್ನ 'ಟಾಟಾ ಟಾಜೊ' ಕ್ಕೆ ಕೂಡಾ ಪ್ರಚಾರ ನೀಡಲು ಟಾಟಾ ಸಂಸ್ಥೆ ಬಯಸಿದೆ.

ರೀಟೈಲ್ ಮಾರುಕಟ್ಟೆಯಲ್ಲಿ ಅನೇಕ ಬದಲಾವಣೆಗಳು ಕಾಣುತ್ತಿರುವ ಸಂದರ್ಭದಲ್ಲಿ ರೀಟೈಲ್ ಜಗತ್ತಿನ ಆಳ ಕಂಡಿರುವ ಸ್ಟಾರ್ ಬಕ್ಸ್ ಪ್ರವೇಶ ಟಾಟಾ ಸಂಸ್ಥೆಗೆ ಲಾಭದಾಯಕವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸ್ಟಾರ್ ಬಕ್ಸ್ ಬಗ್ಗೆ : Starbucks corporation is international coffee company based in Seattle, Washington. It is the largest coffeehouse in the world, with more than 17,000 stores around the globe. Since 1992, the stocks of the company rose impressively. The company is the premier roaster and retailer of specialty coffee in the world. For more details can visit www.starbucks.com.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Starbucks corporation, worlds famous coffee company is planing to enter India, this will be 50:50 joint venture with Tata Global Beverages Ltd. The JV has plans to launch around 30-50 outlets in India with initial investment of Rs 400 crore to be paid equally, this JV will be branded as Starbucks Coffee “A Tata Alliance”.
Please Wait while comments are loading...