ರೆಡ್ಡಿ ಆಪ್ತ ಅಲಿ ಮೇಲೆ ಸಿಬಿಐ ಲುಕ್ ಔಟ್ ನೋಟಿಸ್

ಜನಾರ್ದನ ರೆಡ್ಡಿ ಅವರ ಸ್ಥಿರ, ಚರಾಸ್ಥಿಗಳ ಜಪ್ತಿ ಮಾಡಲು ಬಳ್ಳಾರಿಗೆ ಬಂದಿದ್ದ ಎಂ.ಆರ್ ಖಾನ್ ನೇತೃತ್ವದ ಸಿಬಿಐ ತಂಡ ಈ ನಿರ್ಧಾರ ಕೈಗೊಂಡಿದೆ. ರೆಡ್ಡಿಗೆ ಸೇರಿರುವ ಸಕಲ ವಾಹನಗಳನ್ನು ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ.
ಗಾಲಿ ರೆಡ್ಡಿ ಆಪ್ತ ಸಹಾಯಕ ಅಲಿ ಖಾನ್ ಅವರ ಕುಟುಂಬ ವರ್ಗವನ್ನು ವಿಚಾರಣೆಗೆ ಒಳಪಡಿಸಿದ ಸಿಬಿಐ ತಂಡಕ್ಕೆ ನಿರಾಶೆ ಕಾದಿತ್ತು. ನಾಪತ್ತೆಯಾಗಿರುವ ಅಲಿ ಖಾನ್ ಬಗ್ಗೆ ಯಾವುದೇ ಸಣ್ಣ ಸುಳಿವು ಕೂಡಾ ಸಿಗದ ಕಾರಣ ಕೆಂಡಾಮಂಡಲವಾದ ಸಿಬಿಐ ಅಧಿಕಾರಿ ಖಾನ್ ಅವರು ಮಾಧ್ಯಮಗಳ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಈ ಹಿಂದೆ ಕಳೆದ ಅಕ್ಟೋಬರ್ ನವೆಂಬರ್ ವೇಳೆಯಲ್ಲೂ ಕೂಡಾ ಇದೇ ರೀತಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಯಾವ ಪ್ರಯೋಜನವಾಗಿರಲಿಲ್ಲ.
ಆತ ನಿರಪರಾಧಿಯಾಗಿದ್ದರ ಸಿಬಿಐಗೆ ಶರಣಾಗತನಾಗಿ ಗೊತ್ತಿರುವ ಮಾಹಿತಿಯನ್ನು ಹೇಳಲು ಭಯ ಏಕೆ? ಎಂದು ಸಿಬಿಐ ತಂಡ ಪ್ರಶ್ನಿಸಿದೆ. ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಲುಕ್ ಔಟ್ ನೋಟಿಸ್ ಪ್ರತಿ ತಲುಪಲಿದ್ದು, ಅಲಿಖಾನ್ ಕಂಡರೆ ತಕ್ಷಣವೇ ಬಂಧಿಸಿ ಸಿಬಿಐಗೆ ಒಪ್ಪಿಸಬೇಕಾಗುತ್ತದೆ. ಓದಿ: ಅಸಲಿಗೆ ಯಾರು ಈ ಅಲಿಖಾನ್?












Click it and Unblock the Notifications