• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರೆಸ್ಸೆಸ್ ಹಿಂದೂ ಸಂಗಮಕ್ಕೆ ಯಡಿಯೂರಪ್ಪ ಚಕ್ಕರ್

By Mahesh
|
ಹುಬ್ಬಳ್ಳಿ, ಜ.27: ಸಂಘ ಪರಿವಾರದ ಶಿಸ್ತಿನ ಸಿಪಾಯಿ, ಆರೆಸ್ಸೆಸ್ ಹೇಳಿದ್ದೇ ನನಗೆ ವೇದವಾಕ್ಯ ಎಂದು ಎಲ್ಲೆಡೆ ಸಾರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ತಮ್ಮ ಹೇಳಿಕೆಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಆರಂಭವಾದ 'ವಿರಾಟ್ ಹಿಂದೂ ಶಕ್ತಿ ಸಂಗಮ' ಪ್ರಾಂತೀಯ ಮಹಾಶಿಬಿರ ಕಾರ್ಯಕ್ರಮದ ಆರಂಭದ ದಿನವೇ ಯಡಿಯೂರಪ್ಪ ಗೈರು ಹಾಜರಾಗಿದ್ದಾರೆ.

ಪ್ರಮುಖ ಕಾರ್ಯಕ್ರಮಕ್ಕೆ ಚಕ್ಕರ್ ಹಾಕುವ ಮೂಲಕ ಸದಾನಂದ ಗೌಡರ ಸರ್ಕಾರ ಹಾಗೂ ಆರೆಸ್ಸೆಸ್ ವಿರುದ್ಧ ತಮ್ಮ ಕೋಪವನ್ನು ಬಹಿರಂಗವಾಗಿ ತೋರಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಬೃಹತ್ ಸಮ್ಮೇಳನ ನಡೆಯುತ್ತಿದ್ದು, ಹಾವೇರಿಯಿಂದ ಬೀದರ್, ಬೆಳಗಾವಿಯವರೆಗೆ 13 ಜಿಲ್ಲೆಗಳ 45 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಮೂರು ದಿನಗಳ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕರ್ನಾಟಕ ಪ್ರವಾಸದಲ್ಲಿ ನಿರತರಾಗಿರುವ ಯಡಿಯೂರಪ್ಪ ಅವರು ಹಿಂದೂ ಶಕ್ತಿ ಸಂಗಮಕ್ಕೆ ಗೈರು ಹಾಜರಾಗುತ್ತಾರೆ ಎಂಬ ಕಲ್ಪನೆ ಬಿಜೆಪಿ ಹಿರಿಯ ನಾಯಕರಿಗೂ ಕೂಡಾ ಇರಲಿಲ್ಲ ಎಂದು ಅವರ ಮಾತುಗಳಿಂದ ಸ್ಪಷ್ಟವಾಗಿದೆ.

ಶನಿವಾರ ನಡೆಯುವ ಬೃಹತ್ ಪಥ ಸಂಚಲನದಲ್ಲಾದರೂ ಯಡಿಯೂರಪ್ಪ ಭಾಗವಹಿಸುತ್ತಾರೆ ಎಂದು ಹುಬ್ಬಳ್ಳಿಯ ಸ್ಥಳೀಯ ಸ್ವಯಂ ಸೇವಕರು ನಂಬಿದ್ದಾರೆ. ಆರೆಸ್ಸೆಸ್ ಪ್ರಮುಖರ ಜೊತೆ ನಡೆಯುವ ಬೈಠಕ್ ನಲ್ಲಿ ಸದಾನಂದ ಗೌಡರು ರಾಜಕೀಯ ಚರ್ಚೆ ನಡೆಸುವ ಸುವರ್ಣ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ ಎನ್ನಲಾಗಿದೆ.

ಶುಕ್ರವಾರ ಬೆಳಗ್ಗೆ 11 ರ ವೇಳೆಗೆ ಸಂಘದ ಕಾರ್ಯವಾಹ ಸುರೇಶ್ ಜಿ ಜೋಶಿ ಹಾಗೂ ಮೂರುಸಾವಿರ ಮಠದ ಶ್ರೀಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಸಾನಿದ್ಧ್ಯದಲ್ಲಿ ಬೃಹತ್ ಹಿಂದೂ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಆರೆಸ್ಸೆಸ್ ಪ್ರಮುಖರಾದ ಮೋಹನ್ ಭಾಗವತ್, ಕೃ ಸೂರ್ಯನಾರಾಯಣರಾವ್, ಹರಿಭಾವು ವಜೆ, ಖಗೇಶನ್, ಮಂಗೇಶ್ ಬೇಂಡೆ ಮುಂತಾದವರು ಉಪಸ್ಥಿತರಿದ್ದರು.

ಸದಾನಂದ ಗೌಡರ ಸಂಪುಟದ ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು. ಯಡಿಯೂರಪ್ಪ ಅವರ ನಡೆ ಮಾತ್ರ ನಿಗೂಢವಾಗಿದ್ದು, ಕಾರ್ಯಕರ್ತರಿಗೂ ಗೊಂದಲ ಮೂಡಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಯಡಿಯೂರಪ್ಪ ಸುದ್ದಿಗಳುView All

English summary
Yeddyurappa skips Virat Hindu Shakti Sangam a mega camp organized by the Rashstreeya Swayamsevak Sangh (RSS), north Karnataka region, near Tarihal bypass near here, from January 27 to 29. CM DV Sadananda Gowda, Suresh Kumar and other Senior BJP leaders were present today(Jan.27).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more