ಟೆಕ್ಕಿಗಳಿಗೆ ಶುಭ ಸುದ್ದಿ, 25000 ನೇಮಕಾತಿ ಲಭ್ಯ

ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(TCS) ಸುಮಾರು 25,000 ಹೊಸ ನೇಮಕಾತಿಗಳನ್ನು ಮಾಡಿಕೊಳ್ಳುವುದಾಗಿ ಪ್ರಕಟಿಸಿದೆ.
ಇದಲ್ಲಿ 10,000 ಮಂದಿ ಸ್ಥಳೀಯ ಇಂಜಿನಿಯರ್ ಗಳಿಗೆ ಅವಕಾಶ ಸಿಗಲಿದೆ. ಸಬ್ಸಿಡಿ ದರದಲ್ಲಿ(ಎಕರೆಗೆ ಸುಮಾರು 20ಲಕ್ಷ ದರ)ಭೂಮಿ ಪಡೆದ ಟಿಸಿಎಸ್ ಈ ರೀತಿ ಸರ್ಕಾರಕ್ಕೆ ಉಪಕಾರ ಮಾಡುತ್ತಿದೆ.
2013ರ ವೇಳೆಗೆ ಸುಮಾರು 25,000 ನೇಮಕಾತಿ ನಡೆಸಲು ಉದ್ದೇಶಿಸಲಾಗಿದೆ. ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಟಿಸಿಎಸ್ ಹೇಳಿದೆ.
ಟಿಸಿಎಸ್ ಸಂಸ್ಥೆ ನಂತರ ಇನ್ಫೋಸಿಸ್ ಕೂಡಾ ತನ್ನ ಮುಂದಿನ ಯೋಜನೆ ಬಗ್ಗೆ ಪ್ರಕಟಿಸುವ ಸಾಧ್ಯತೆಯಿದೆ. ಬೆಂಗಳೂರು ತೊರೆದು ಇಂದೋರ್ ಕಡೆ ಮುಖ ಮಾಡಿರುವ ಈ ಎರಡೂ ಸಂಸ್ಥೆಗಳಿಗೆ ಅಲ್ಲಿನ ಸರ್ಕಾರ ವಿಶೇಷ ನೆರವು, ಸೌಲಭ್ಯಗಳನ್ನು ನೀಡುತ್ತಿದೆ.












Click it and Unblock the Notifications