ರು.4ಕ್ಕೆ ನಂದಿನಿ ಹಾಲು ಮನೆಗೆ ಕೊಂಡೊಯ್ಯಿರಿ

ಬಹುಬೇಡಿಕೆಯ ನಂದಿನಿ ಗುಡ್ ಲೈಫ್ ಹಾಲನ್ನು ಟೆಟ್ರಾಪ್ಯಾಕ್ ನಲ್ಲಿ ತುಂಬಿ ಮಾರಾಟ ಮಾಡುವ ಯೋಜನೆಯನ್ನು ಕೆಎಂಎಫ್ ಅಧ್ಯಕ್ಷ ಜಿ ಸೋಮಶೇಖರ ರೆಡ್ಡಿ ಪ್ರಕಟಿಸಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ನಂದಿನಿ ಗುಡ್ ಲೈಫ್ ಗೆ ಭಾರಿ ಬೇಡಿಕೆ ಇದೆ. ಈ ಯೋಜನೆ ಮೂಲಕ ನಾವು ದಕ್ಷಿಣ ಭಾರತದ ಮೂಲೆ ಮೂಲೆಗೂ ನಂದಿನಿ ಹಾಲು ಸರಬರಾಜು ಆಗುವಂತೆ ನೋಡಿಕೊಳ್ಳುತ್ತೇವೆ ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಟೆಟ್ರಾ ಪ್ಯಾಕ್ ಮೂಲಕ ನೀಡಲಾಗುತ್ತಿರುವ ನಂದಿನಿ ಹಾಲಿನ ದರ ಅತಿ ಕಡಿಮೆಯಾಗಿದೆ ಹಾಗೂ ಇದು ಹೆಚ್ಚು ಕಾಲ ಇಡಬಹುದಾಗಿದ್ದು, ಹೆಚ್ಚು ಜನರನ್ನು ತಲುಪಲು ಸಹಕಾರಿಯಾಗಿದೆ ಎಂದು ಟೆಟ್ರಾ ಪ್ಯಾಕ್ ದಕ್ಷಿಣ ಏಷ್ಯಾದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕಂದರ್ಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications