ಚಿರರುಣಿ...ನಿಖಿಲ್ ಬ್ಲಾಗ್, ಗೌಡ್ರ ಪಾಲಿಟಿಕ್ಸ್

ಗಣ್ಯ ವ್ಯಕ್ತಿಗಳು ಪ್ರಮುಖ ನಿರ್ಧಾರಗಳನ್ನು ಸುದ್ದಿಗೋಷ್ಠಿ ಕರೆದು ಎಲ್ಲರ ಮುಂದೆ ಹೇಳಿಕೊಳ್ಳುವ ಮುನ್ನ.. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸುವುದು ಸಾಮಾನ್ಯ ವಿಷಯವಾಗಿದೆ. ಅದರಂತೆ ನಿಖಿಲ್ ಕೂಡಾ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಇರುವ ಗೊಂದಲಗಳಿಗೆ ತಮ್ಮ ಬ್ಲಾಗಿನಲ್ಲಿ ಉತ್ತರ ನೀಡಿದ್ದಾರೆ.
ಜನವರಿಯಲ್ಲಿ ಆರಂಭಿಸಲಾದ ಬ್ಲಾಗಿನಲ್ಲಿ ನಿಖಿಲ್ ಅವರ ವ್ಯಕ್ತಿಚಿತ್ರ ನೋಡಿದವರ ಸಂಖ್ಯೆ 300 ದಾಟಿಲ್ಲ. ನಿಮ್ಮ ಪ್ರೀತಿಗೆ ಚಿರರುಣಿ... ಎಂಬ ಲೇಖನದ ಶೀರ್ಷಿಕೆಯನ್ನು ದಿನಪತ್ರಿಕೆ ಪ್ಲಸ್ ಟಿವಿ ಮಾಧ್ಯಮ ಹೊಂದಿರುವ ಸಂಸ್ಥೆ ತಿದ್ದಿ ಚಿರರುಣಿ.ಯನ್ನು ಚಿರಋಣಿ ಮಾಡಿದೆ ಪ್ರಕಟಿಸಿದೆ.
ಸ್ವಾರ್ಥ ಬಿಟ್ಟು ಸಮಾಜದತ್ತ ಮುಖ ಮಾಡಬೇಕು ಎಂಬ ಸಂಕಲ್ಪ ಹೊಂದಿರುವ ಯುವ ಮನಸ್ಸಿನ ನಿಖಿಲ್ ಅವರನ್ನು ರಾಜಕೀಯಕ್ಕೆ ಎಳೆತರಲು ಜೆಡಿಎಸ್ ಯುವಘಟಕ ಉತ್ಸುಕವಾಗಿದೆ. ಕುಮಾರಸ್ವಾಮಿ ದಂಪತಿಗಳು ಒಪ್ಪಿಗೆ ನೀಡಿದ್ದರೂ ಜೆಡಿಎಸ್ ವರಿಷ್ಠ ದೇವೇಗೌಡರ ಸರಿಯಾದ ಮಹೂರ್ತಕ್ಕೆ ಕಾಯುತ್ತಿದ್ದು, ಮೊಮ್ಮಗನನ್ನು ರಾಜಕೀಯ ರಂಗ ತರಲಿದ್ದಾರೆ ಎನ್ನಲಾಗಿದೆ.












Click it and Unblock the Notifications