ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟ್ಟಪರ್ತಿ ಬಾಬಾ ಆಸ್ಪತ್ರೆಗೆ ಉಚಿತ ವಿದ್ಯುತ್ ಕಟ್

By Srinath
|
Google Oneindia Kannada News

ap-stops-free-power-to-puttaparthi-saibaba-hospital
ಹೈದರಾಬಾದ್‌, ಜ.23: ಪುಟ್ಟಪರ್ತಿಯಲ್ಲಿರುವ ದಿವಂಗತ ಸಾಯಿಬಾಬಾ ಅವರ ಅತ್ಯಾಧುನಿಕ ಆಸ್ಪತ್ರೆಗೆ ಉಚಿತವಾಗಿ ವಿದ್ಯುತ್ ನೀಡುವುನ್ನು ನಿಲ್ಲಿಸಲು ಆಂಧ್ರ ಸರಕಾರ ನಿರ್ಧರಿಸಿದೆ. ಅನಂತಪುರ ಜಿಲ್ಲೆಯ ಪುಟ್ಟಪರ್ತಿಯಲ್ಲಿನ ಪ್ರಶಾಂತಿ ಗ್ರಾಮದಲ್ಲಿರುವ ಈ ಇಡೀ ಆಸ್ಪತ್ರೆಗೆ 'ಸಬ್ಸಿಡಿ ದರದ ವಿದ್ಯುತ್ ಯೋಜನೆ'ಯಲ್ಲಿ ಇದುವರೆಗೆ ಉಚಿತ ವಿದ್ಯುತ್ ಸರಬರಾಜು ಆಗುತ್ತಿತ್ತು.

ಇದೀಗ ಆಂಧ್ರ ಸರಕಾರವು 2009ರ ಜನವರಿಯಿಂದ ಅನ್ವಯವಾಗುವಂತೆ ಈ ಆಸ್ಪತ್ರೆ ಬಳಸಿರುವ ಪ್ರತಿ ಯುನಿಟ್ ವಿದ್ಯುತ್ ಗೆ ಹೆಚ್ಚುವರಿಯಾಗಿ 30 ಪೈಸೆ ಲೆವಿ ವಸೂಲಿ ಮಾಡುವಂತೆಯೂ ಆಂಧ್ರ ಪ್ರದೇಶ ವಿದ್ಯುತ್ ಮಂಡಳಿಗೆ ಸೂಚಿಸಿದೆ.

ಈ ಸುದ್ದಿ ಕೇಳಿದ ಸಾರ್ವಜನಿಕರು ದೇಶ ವಿದೇಶಗಳಿಂದ ಕೋಟ್ಯಂತರ ರುಪಾಯಿ ದೇಣಿಗೆ ಸ್ವೀಕರಿಸುತ್ತಿದ್ದ ವಿಶ್ವ ಪ್ರಸಿದ್ಧ ಆಸ್ಪತ್ರೆಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡುವ ಜರೂರತ್ತಾದರೂ ಏನಿತ್ತು ಎಂದು ಆಶ್ಚರ್ಯದಿಂದ ಕೇಳುತ್ತಿದ್ದಾರೆ.

ನಾನಾ ರೂಪದ ಬಳಕೆದಾರರಿಗೆ ವಿದ್ಯುತ್ ಸರಬರಾಜು ಮಾಡುವುದು ಸರಕಾರಕ್ಕೆ ಕಷ್ಟವಾಗಿದೆ. ಅಧಿಕ ಬೆಲೆ ತೆತ್ತು ವಿದ್ಯುತ್ ಖರೀದಿಸಿ, ಸರಬರಾಜು ಮಾಡುವ ಅನಿವಾರ್ಯತೆ ಎದುರಾಗಿದೆ. ಇಂತಹ ಗ್ರಾಹಕರ ಮೇಲೆ ಹೆಚ್ಚುವರಿ ದರ ವಿಧಿಸುವಂತೆ ಕೇಂದ್ರ ವಿದ್ಯುತ್ ಇಲಾಖೆಯು ತಾಕೀತು ಮಾಡಿದೆ.

ಆದ್ದರಿಂದ ಸಬ್ಸಿಡಿ ದರದಲ್ಲಿ ವಿದ್ಯುತ್ ನೀಡುವ ಯೋಜನೆಯಲ್ಲಿ ತಕ್ಷಣಕ್ಕೆ ಕೈಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾಯಿಬಾಬಾ ಆಸ್ಪತ್ರೆಗೆ ಇನ್ನು ಮುಂದೆ ಉಚಿತವಾಗಿ ವಿದ್ಯುತ್ ನೀಡಲಾಗದು ಎಂದು ಸರಕಾರ ಶನಿವಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

English summary
The energy department has withdrawn the free power supply to Sri Satya Sai Institute of Higher Medicine located at Prasanthi Gram in Anantapur district. It has also levied a charge of 30 paisa per unit of power consumed by the institute. Free power was offered to the institute under the subsidised power tariff scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X