ಮಧು ಬಂಗಾರಪ್ಪ ಆಯ್ಕೆ ಸಮರ್ಥಿಸಿಕೊಂಡ ಕುಮಾರ್

ಮಧು ಅವರ ನೇಮಕ ವಿಷಯದಲ್ಲಿ ಗೊಂದಲವಿಲ್ಲ. ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಆದರೆ ರಾಜೇಶ್ ಗುಂಡೂರಾವ್ ಅವರಿಗೆ ಯಾವುದೇ ಆಶ್ವಾಸನೆ ನೀಡಿರಲಿಲ್ಲ. ಮಧು ಅವರು ಆ ಸ್ಥಾನಕ್ಕೆ ಯೋಗ್ಯರಾಗಿದ್ದು, ಮುಂದಿನ ರಾಜ್ಯ ಪ್ರವಾಸದಲ್ಲಿ ಪಾಲ್ಗೊಂಡು ರಾಜ್ಯ ಯುವ ಘಟಕವನ್ನು ವಿಸ್ತರಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯ ಪ್ರವಾಸ: ಫೆ.10ರಂದು ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಾಜ್ಯ ಪ್ರವಾಸ ಆರಂಭಿಸಲಾಗುತ್ತದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ್, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಸೇರಿದಂತೆ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.
ಪ್ರವಾಸ ಮುಕ್ತಾಯದ ನಂತರ ಮಾರ್ಚ್ ಮೊದಲ ವಾರದಲ್ಲಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಹುಚ್ಚರಂತೆ ರಾಜ್ಯವನ್ನು ಸುತ್ತುತ್ತೇನೆ ಎಂದಿರುವ ಯಡಿಯೂರಪ್ಪ ಅವರು ಬಿಜೆಪಿ ಹುಚ್ಚರ ಸಂತೆ ಎಂದು ಸಾಬೀತು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಕುಹಕವಾಡಿದರು.












Click it and Unblock the Notifications