ಮಾಜಿ ಸಿಎಂಗಳ ಅಕ್ರಮ ಮೊತ್ತ 299,42,72,022 ರೂ

ಗಣಿ ಮತ್ತು ಭೂ ವಿಜ್ಞಾನ, ಕರ್ನಾಟಕ ಅರಣ್ಯ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ, ಸುಮಾರು 7000 ಹೆಕ್ಟೇರ್ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ.
ಕೋರ್ಟ್ ವಿವರಣೆ : ಕಾರ್ಯಕರ್ತ ಅಬ್ರಹಾಂ ಟಿ.ಜೋಸೆಫ್ ಲೋಕಾಯುಕ್ತ ಕೋರ್ಟ್‌ನಲ್ಲಿ ನ.30ರಂದು ಖಾಸಗಿ ದೂರು ದಾಖಲಿಸಿದ್ದರು.ದೂರನ್ನು ಅಂಗೀಕರಿಸಿದ್ದ ಲೋಕಾಯುಕ್ತ ಕೋರ್ಟ್ ಡಿ.3ರಂದು ತನಿಖೆಗೆ ಆದೇಶಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಎಸ್ಪಿ ಜಗದೀಶ್ ಅವರು ತ್ರಿಮೂರ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.ನಂತರ ಮೂವರು ಈ ಆದೇಶ ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಆದರೆ, ತನಿಖೆ ಮುಂದುವರೆಸಲು ಹೈಕೋರ್ಟ್ ಆದೇಶ ನೀಡಿರುವುದು ಮೂವರಿಗೂ ಹಿನ್ನೆಡೆಯಾಗಿದೆ. ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಎಚ್.ಡಿ.ಕುಮಾರ ಸ್ವಾಮಿ ನಿರ್ಧರಿಸಿದ್ದಾರೆ. ಆದೇಶ ತಮಗೆ ಪೂರ್ಣವಾಗಿ ತೃಪ್ತಿ ತಂದಿಲ್ಲ. ಹಾಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಅವರ ಪರ ವಕೀಲ ಬಾಷಾ ಹೇಳಿದ್ದಾರೆ. ಅದರೆ, ಧರಂಸಿಂಗ್ ಹಾಗೂ ಎಸ್ಸೆಂ ಕೃಷ್ಣ ಅವರ ಮುಂದಿನ ನಡೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.












Click it and Unblock the Notifications