ಕುಮಾರಣ್ಣನಿಗೆ ಜಂತಕಲ್ ಅಕ್ರಮದಿಂದ ಬಚಾವ್?

HD Kumaraswamy
ಬೆಂಗಳೂರು, ಜ.21: ಹೈಕೋರ್ಟ್ ಆದೇಶ ಕುಮಾರಸ್ವಾಮಿಗೆ ಅಲ್ಪ ಹಿನ್ನಡೆಯಾಗಿದೆ. ಆದರೆ, ಜಂತಕಲ್ ಮೈನಿಂಗ್ ವಿಷಯದಲ್ಲಿ ಕುಮಾರಸ್ವಾಮಿ ಬಚಾವ್ ಆಗುವ ಲಕ್ಷಣಗಳು ತೋರುತ್ತಿದೆ.

ಎಚ್.ಡಿ.ಕುಮಾರಸ್ವಾಮಿ ತಮ್ಮ ಅಧಿಕಾರವಧಿ(2006ರ ಮೇ ತಿಂಗಳಿನಿಂದ ಅಕ್ಟೋಬರ್ 2007)ಯಲ್ಲಿ ಬಳ್ಳಾರಿ ಜಿಲ್ಲೆಯ ತಿಮ್ಮಪ್ಪನಗುಡಿ, ವಾಹಳ್ಳಿ, ಎನ್‌ಇಬಿ ರೇಂಜ್ ಬಳಿ ಸುಮಾರು 550 ಎಕರೆ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ತಮ್ಮ ಕುಟುಂಬ ಸದಸ್ಯರ ಸಹಭಾಗಿತ್ವದ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಅಕ್ರಮ ಪರವಾನಗಿ ನೀಡಿದ್ದಾರೆಂಬ ಆರೋಪವನ್ನು ತನಿಖೆ ನಡೆಸುವಂತೆ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.

ಆದರೆ, ಮುಖ್ಯಮಂತ್ರಿ ಕಚೇರಿಯ ದುರ್ಬಳಕೆ ಹಾಗೂ ಅಧಿಕಾರ ದುರುಪಯೋಗ ಮಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸಿ, ಶೇಖರಿಸಿದ್ದ ಮೃದು ಅದಿರಿನ ಸಾಗಣೆಗೆ ಜಂತಕಲ್ ಮೈನಿಂಗ್ ಕಂಪೆನಿಯ ಪರವಾನಗಿ ನವೀಕರಣ ಮತ್ತು ಪರವಾನಗಿ ನವೀಕರಣ ಮಾಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಆಯುಕ್ತರ ಮೇಲೆ ಒತ್ತಡ ಹೇರಿದ ಆರೋಪಗಳನ್ನು ತನಿಖೆಯಿಂದ ಹೊರಗಿಡಲಾಗಿದೆ.

ಜೊತೆಗೆ ಅಕ್ರಮ ಗಣಿಗಾರಿಕೆಗೆ ಪರವಾನಗಿ ನೀಡಿ ಗಣಿ ಕಂಪೆನಿಗಳಿಗೆ 150 ಕೋಟಿ ರೂ. ಲಂಚ ಪಡೆದ ಆರೋಪ ಸಂಬಂಧ ತನಿಖೆ ನಡೆಸದಂತೆ ತಿಳಿಸಿದ್ದಾರೆ. ಈ ಆರೋಪ ಸಂಬಂಧ ಎಚ್.ಡಿ.ಕುಮಾರಸ್ವಾಮಿ ವಿರುದ್ಧ 2006ರಲ್ಲಿ ದೂರು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+