ಡಿ-ರಿಸರ್ವೇಷನ್ ಮಾಡಿ ಸಿಕ್ಕಿ ಬಿದ್ದ ಸೋಮನಹಳ್ಳಿ ಕೃಷ್ಣ

ಬೆಂಗಳೂರು, ಜ.21: ಅಕ್ರಮ ಗಣಿಗಾರಿಕೆಯ ಸುಳಿಯಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿಗಳಾದ ಎಸ್ಎಂ ಕೃಷ್ಣ, ಧರ್ಮ ಸಿಂಗ್ ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಆದೇಶ ನೀಡಲು ಏನು ಕಾರಣ?. ಕೋಟ್ಯಾಂತರ ರೂ ನಷ್ಟವಾಗಿದ್ದರೂ ತ್ರಿಮೂರ್ತಿಗಳ ಆಸ್ತಿ ತನಿಖೆಗೆ ಯಾಕೆ ಇನ್ನೂ ಆದೇಶಿಸಿಲ್ಲ?

ಇಂಗ್ಲಿಷ್ ದೈನಿಕವೊಂದರಲ್ಲಿ ಪ್ರಕಟವಾದ ಸುದ್ದಿ ಆಧರಿಸಿ ಸಾಮಾಜಿಕ ಕಾರ್ಯಕರ್ತ ಅಬ್ರಾಹಂ ದೂರು ಸಲ್ಲಿಸಿದ್ದರು.ಆದರೆ, ಈ ಆರೋಪವನ್ನು ದೃಢಪಡಿಸುವ ಪೂರಕ ಹಾಗೂ ಸೂಕ್ತ ದಾಖಲಾತಿಗಳಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳು ಈ ವಿಷಯ ಕುರಿತು ತನಿಖೆಯನ್ನು ಕೈಬಿಡುವಂತೆ ಆದೇಶಿಸಿದ್ದಾರೆ.

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಕೊಟ್ಟ ಆರೋಪ ಸಂಬಂಧ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ಮತ್ತು ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕಾನೂನು ಇರುವುದೇ ಮುರಿಯುವುದಕ್ಕೆ? :ಎಸ್.ಎಂ.ಕೃಷ್ಣ ತಮ್ಮ ಆಡಳಿತಾವಧಿಯಲ್ಲಿ (1999 ಅ.18ರಿಂದ 2004ರ ಮೇ 28ರವರೆಗೆ) ಗಣಿ ಮತ್ತು ಭೂ ವಿಜ್ಞಾನ ಕಾಯ್ದೆ ಮತ್ತು ಮೈನಿಂಗ್ ನಿಯಮಗಳನ್ನು ಉಲ್ಲಂಘಿಸಿ ಸಂರಕ್ಷಿತ ಅರಣ್ಯ ಪ್ರದೇಶ ಸೇರಿದಂತೆಸುಮಾರು 6832.48 ಹೆಕ್ಟೇರ್ ಪ್ರದೇಶವನ್ನು ಡಿ-ರಿಸರ್ವೇಷನ್ ಮಾಡಿದ್ದಾರೆ.

ಆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಮೈಸೂರು ಮಿನರಲ್ಸ್, ಡೆಕ್ಕನ್ ಮೈನಿಂಗ್ ಕಂಪೆನಿ ಸೇರಿದಂತೆ 10 ಕಂಪೆನಿಗಳಿಗೆ ಅನುಮತಿ ನೀಡಿದ್ದಾರೆ. ಇದಲ್ಲದೆ ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು 84 ಅಕ್ರಮ ಪರವಾನಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೃಷ್ಣರ ಆಳಿಯ ಸಾಕಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಮೇಲೆ ಆರೋಪಿಸಲಾಗಿರುವ ಅಕ್ರಮ ಸರಮಾಲೆ.ಮುಂದೆ ಓದಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+