ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಯುಎಸ್, ಯುಕೆ ಶಾಖೆ, ಶೇ.50 ನೇಮಕ ಹೆಚ್ಚಳ

By Mahesh
|
Google Oneindia Kannada News

Azim Premji
ಬೆಂಗಳೂರು, ಜ.21: ವಿಪ್ರೋ ಸಂಸ್ಥೆ ತನ್ನ ಜಾಗತಿಕ ಐಟಿ ಸೇವಾ ಕ್ಷೇತ್ರದಲ್ಲಿ ಶೇ.50 ರಷ್ಟು ಉದ್ಯೋಗಗ ನೇಮಕಾತಿ ಹೆಚ್ಚಳದ ಯೋಜನೆಯನ್ನು ರೂಪಿಸಿದೆ. 2015ರೊಳಗೆ ಸ್ಥಳೀಯರಿಗೆ ಆದ್ಯತೆ ನೀಡಿ, ನೇಮಕಾತಿ ವಿಳಂಬದಿಂದ ಆದ ವ್ಯತ್ಯಯವನ್ನು ಸರಿಪಡಿಸಲಾಗುವುದು ಎಂದು ವಿಪ್ರೋ ಚೇರ್ ಮನ್ ಅಜೀಂ ಪ್ರೇಮ್ ಜಿ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.38 ಹಾಗೂ ಶೇ.31 ರಷ್ಟು ಮಾತ್ರ ನೇಮಕಾತಿ ಆಗಿದೆ. ಈ ಪ್ರಮಾಣವನ್ನು ಹೆಚ್ಚಿಸಲಾಗುತ್ತದ. ಮೂರನೇ ತ್ರೈಮಾಸಿಕ ಅವಧಿಯಲ್ಲಿ 5,004 ಉದ್ಯೋಗಿಗಳನ್ನು ಸೇರಿಕೊಳ್ಳಲಾಗಿದೆ.136,734 ಟೆಕ್ಕಿಗಳ ನೇಮಕವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 119,491 ನೇಮಕಾತಿ ಆಗಿತ್ತು.

ವಿದೇಶದಲ್ಲಿ ಪ್ರತಿಭಾವಂತರ ಕೊರತೆ?:
ನೇಮಕಾತಿ ವಿಳಂಬದಿಂದಾಗಿ ಬ್ರಿನ್, ಯುರೋಪ್, ಯಎಸ್ ನಲ್ಲಿ ಪ್ರತಿಭಾವಂತರು ಸಿಗುತ್ತಿಲ್ಲ. ನೇಮಕಗೊಂಡವರು ಐಟಿ ತಜ್ಞರಾಗಿರುವುದಿಲ್ಲ. ಹಾಗಾಗಿ ಭಾರತದ ಟೆಕ್ಕಿಗಳನ್ನು ಇಲ್ಲಿಗೆ ಕರೆ ತಂದು ತರಬೇತಿ ನೀಡಲು ಯೋಜಿಸಲಾಗಿದೆ ಎಂದರು. ಭಾರತದ ಟೆಕ್ಕಿಗಳಿಗೆ ಆನ್ ಸೈಟ್ ಅವಕಾಶ ಹೆಚ್ಚಳವಾಗಲಿದ್ದು, ವಿದೇಶಿ ಫ್ರೆಶರ್ಸ್ ಆಯ್ಕೆ, ತರಬೇತಿ ಹೊಣೆ ಹೊರಬೇಕಿದೆ.

ವಿಪ್ರೋ ಗ್ಲೋಬಲ್ ಐಟಿ ಜಾತಕ: 500 ಕ್ಕೂ ಅಧಿಕ ಗ್ರಾಹರನ್ನು ಹೊಂದಿರುವ ವಿಪ್ರೋ, ಆರ್ಥಿಕ, ರೀಟೈಲ್, ಸಾರಿಗೆ, ಉತ್ಪಾದನೆ, ಆರೋಗ್ಯ, ಇಂಧನ, ತಂತ್ರಜ್ಞಾನ, ಟೆಲಿಕಾಂ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಸೇವೆ ಒದಗಿಸುತ್ತಿದೆ.

ಸುಮಾರು 70 ದೇಶಗಳಿಗೆ ಸೇರಿದ 51,959ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಈಗ ಭಾರತದಿಂದ ಹೊರಗಡೆ ಶೇ.50 ರಷ್ಟು ನೇಮಕಾತಿ ಮಾಡಲು ಯೋಜಿಸಿದೆ.

English summary
India's third largest software giant Wipro has announced that 50 pc openings for its global IT services outside India by 2015. In Q3 Wipro had net addition of 5,004 people this fiscal. Premji has agreed that there is lateral hiring was difficult due to acute shortage of skilled engineers in the US and Europe, to tackle this Indian techies will get more onsite projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X