ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ Q3: ಶೇ.10ರಷ್ಟು ನಿವ್ವಳ ಲಾಭ ಏರಿಕೆ

By Mahesh
|
Google Oneindia Kannada News

Wipro q3 report 2012
ಬೆಂಗಳೂರು, ಜ.20: ದೇಶದ ಅಗ್ರಗಣ್ಯ ಸಾಫ್ಟ್ ವೇರ್ ಸಂಸ್ಥೆ ವಿಪ್ರೋ ಡಿ.31,2011ಕ್ಕೆ ಕೊನೆಗೊಂಡ ತ್ರೈಮಾಸಿಕ ವರದಿಯನ್ನು ಶುಕ್ರವಾರ(ಜ.20) ಪ್ರಕಟಿಸಿದೆ. ವಾರ್ಷಿಕವಾಗಿ ಶೇ.10 ರಷ್ಟು ನಿವ್ವಳ ಲಾಭ ಪಡೆದಿದೆ.

ದೇಶದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ವಿಪ್ರೋ 1,456 ಕೋಟಿ ಲಾಭ ಗಳಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1,319 ಕೋಟಿ ರು ಲಾಭ ಗಳಿಸಿತ್ತು.

ಸಂಸ್ಥೆ ಆದಾಯ 9,997 ಕೋಟಿ ರು ಗಳಿಸಿದ್ದು, ಶೇ.28ರಷ್ಟು ಪ್ರಗತಿ ಸಾಧಿಸಿದೆ. ಐಟಿ ವಿಭಾಗದ ಆದಾಯವೇ 7,608 ಕೋಟಿ ರು ಹಾಗೂ ಐಟಿಯೇತರ ಸಂಸ್ಥೆ ಆದಾಯ 1,583 ಕೋಟಿ ರು ಆಗಿದೆ ಎಂದು ಸಂಸ್ಥೆ ಹೇಳಿದೆ.

ರು.2 ಪ್ರತಿ ಷೇರು/ADS ಆಗಿ ಮಧ್ಯಂತರ ಡಿವೆಂಡೆಡ್ ಅನ್ನು ಕಂಪನಿ ಘೋಷಣೆ ಮಾಡಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ 39 ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ.5,004 ಸಹ ಉದ್ಯೋಗಿಗಳ ನೇಮಕಾತಿ ಆಗಿದೆ. ಒಟ್ಟು 136,734 ಉದ್ಯೋಗಿಗಳನ್ನು ಸಂಸ್ಥೆ ಹೊಂದಿದೆ.

ಬಾಂಬೆ ಷೇರು ಮಾರುಕಟ್ಟೆಯಲ್ಲಿ ಬೆಳಗ್ಗೆ ವಿಪ್ರೋ ಸಂಸ್ಥೆ ಷೇರುಗಳು ಶೇ 5ರಷ್ಟು ಪ್ರಗತಿ ಕಂಡಿತ್ತು.

English summary
Wipro, announced its financial results for the quarter ended December 31, 2011. During the quarter the company has reported 10% year on year (y-o-y) rise in its consolidated net profit at Rs 1,456 crore and sequential growth of 12%. In the previous year, it had reported a net profit of Rs 1,319 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X