ಈ ಜನ್ಮದಲ್ಲಿ ಎನ್ ಸಿಪಿ ಸೇರುವುದಿಲ್ಲ: ಬಿಎಸ್ ವೈ

ಯಡಿಯೂರಪ್ಪ ಅವರು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಸೇರುತ್ತಾರೆ ಎಂದು ಪಕ್ಷದ ಕಾರ್ಯಾದ್ಯಕ್ಷ ಅಶೋಕ ಜವಳಿ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, 'ಈ ಜನ್ಮದಲ್ಲಿ ನಾನು ಎನ್‌ಸಿಪಿ ಸೇರುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ.ಬೇಕಿದ್ದರೆ ಎನ್‌ಸಿಪಿ ನಾಯಕರೇ ಬಿಜೆಪಿ ಸೇರಲಿ ಎಂದು ತೀರುಗೇಟು ನೀಡಿದ್ದಾರೆ.
ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕರೆ, ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸುತ್ತೇನೆ. ಆದರೆ, ಅವಕಾಶ ನೀಡುವುದು ಹೈಕಮಾಂಡ್ ಗೆ ಬಿಟ್ಟ ವಿಷ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ತುಮಕೂರಿನಲ್ಲಿ ಹೇಳಿದರು.
ತುಮಕೂರಿನ ಗೊಳೂರು, ಹೆಬ್ಬೂರಿನಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ ಅವರು, ನಾನು ಶಕ್ತಿ ಪ್ರದರ್ಶನ ಮಾಡಲು ಈ ಪ್ರವಾಸ ಕೈಗೊಂಡಿಲ್ಲ ಎಂದು ಪುನರುಚ್ಚರಿಸಿದರು.












Click it and Unblock the Notifications