ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1,067 ಕೋಟಿ ತೆರಿಗೆ ಭಾರ್ತಿ ಏರ್ ಟೆಲ್ ಕಟ್ಟಿಲ್ಲ

By Mahesh
|
Google Oneindia Kannada News

Bharti Airtel TDS due
ನವದೆಹಲಿ, ಜ.19: ಟೆಲಿಕಾಂ ಕ್ಷೇತ್ರದ ಅಗ್ರ ಸಂಸ್ಥೆ ಭಾರ್ತಿ ಏರ್ ಟೆಲ್ ಗೆ 1,067 ಕೋಟಿ ರು ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಕಳೆದ ನಾಲ್ಕು ಆರ್ಥಿಕ ವರ್ಷಗಳಿಂದ ಟಿಡಿಎಸ್ ಹಣ ಬಾಕಿ ಉಳಿಸಿಕೊಂಡಿರುವ ಏರ್ ಟೆಲ್ ಗೆ ಆದಾಯ ತೆರಿಗೆ ಇಲಾಖೆ ಈ ಕೂಡಲೇ 1,067.24 ಕೋಟಿ ರು ಪಾವತಿಸುವಂತೆ ಸೂಚಿಸಿದೆ. ಐಟಿ ಕಾಯ್ದೆ ಸೆಕ್ಷನ್ 201,195 ಪ್ರಕಾರ ನೋಟಿಸ್ ಜಾರಿ ಮಾಡಲಾಗಿದೆ.

ಆದರೆ,ಸಾಗರೋತ್ತರದಲ್ಲಿರುವ ವಿಭಾಗಗಳ ಟಿಡಿಎಸ್ ಬಗ್ಗೆ ಇಲಾಖೆ ಪ್ರಸ್ತಾಪಿಸಿರುವುದು ಸರಿಯಲ್ಲ ಎಂದು ಭಾರ್ತಿ ಏರ್‍ ಟೆಲ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.

2007-08 ಆರ್ಥಿಕ ವರ್ಷದಲ್ಲಿ 202.07 ಕೋಟಿ ರು, 2008-09ರಲ್ಲಿ 329.913 ಕೋಟಿ ರು, 2009-10ರಲ್ಲಿ 313.577 ಕೋಟಿ ರು ಹಾಗೂ 2010-11 ರಲ್ಲಿ 221.681 ಕೋಟಿ ರು ಬಾಕಿ ಬರಬೇಕಿದೆ ಎಂದು ತೆರಿಗೆ ಇಲಾಖೆ ಹೇಳಿದೆ.

ವಿದೇಶದಲ್ಲಿ ನೀಡಲಾಗಿರುವ ಮೊಬೈಲ್ ಸೇವೆ ನೀಡುತ್ತಿರುವ ಭಾರ್ತಿ ಸಂಸ್ಥೆ ಸುಮಾರು 19 ದೇಶಗಳಿಂದ 230 ಮಿಲಿಯನ್ ಗ್ರಾಹಕರನ್ನು ಹೊಂದಿದೆ.

English summary
The Income Tax Department has slapped a Rs 1,067-crore demand notice on telecom giant Bharti Airtel for non-payment of TDS dues in the last four financial years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X