ಅತ್ತ ರೆಡ್ಡಿಗೂ ಬೇಲಿಲ್ಲ, ಲಕ್ಷ್ಮಿಗೂ ಸಿಹಿ ಸುದ್ದಿಯಿಲ್ಲ

ಜೊತೆಗೆ ಶ್ರೀಲಕ್ಮಿ ಜೈಲುವಾಸವನ್ನು ಫೆ.21 ತನಕ ವಿಸ್ತರಿಸಲಾಗಿದ್ದು, ಫೆ.15ರೊಳಗೆ ಗಾಲಿ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶ್ರೀಲಕ್ಷ್ಮಿ ಪಾತ್ರ ಕುರಿತು ಚಾರ್ಜ್ ಶೀಟ್ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶ್ರೀಲಕ್ಷ್ಮಿ ಆರೋಪಿ ನಂ.4 ಆಗಿದ್ದು, ಇನ್ನು ಒಂದು ತಿಂಗಳ ಕಾಲ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಈ ಮಧ್ಯೆ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ಪ್ರಕರಣವನ್ನು ಜ.25ಕ್ಕೆ ನ್ಯಾ.ನಾಗಮೂರ್ತಿ ಶರ್ಮ ಮುಂದೂಡಿದ್ದಾರೆ.
ಸಿಬಿಐ ಸಲ್ಲಿಸಲಿರುವ ಚಾರ್ಜ್ ಶೀಟ್ ಆಧಾರದ ಮೇಲೆ ಶ್ರೀಲಕ್ಷ್ಮಿ ಹಾಗೂ ಜನಾರ್ದನ ರೆಡ್ಡಿ ಅವರ ಮುಂದಿನ ಭವಿಷ್ಯವನ್ನು ಕೋರ್ಟ್ ನಿರ್ಧರಿಸಲಿದೆ.












Click it and Unblock the Notifications