ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ಗಾಂಧಿ ಪೋಸ್ಟರಿಗೆ ಮಸಿ: ಬಾಬಾ 'ಕೈ'ವಾಡ

By Srinath
|
Google Oneindia Kannada News

miscreants-pour-black-ink-on-sonia-gandhi-poster
ನವದೆಹಲಿ, ಜ.17: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪೋಸ್ಟರ್ ಮೇಲೆ ದುಷ್ಕರ್ಮಿಗಳು ಸೋಮವಾರ ಕಪ್ಪು ಮಸಿ ಬಳಿದಿರುವ ಘಟನೆ ನಡೆದಿದೆ.
ಕಳೆದ ವಾರ ಯೋಗ ಗುರು ಬಾಬಾ ರಾಮದೇವ್ ಮೇಲೆ ನಡೆದ ಮಸಿ ದಾಳಿಗೆ ಪ್ರತೀಕಾರವಾಗಿ ಈ ದುಷ್ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ.

ಘಟನೆಯ ಸಂಬಂಧ ತ್ರಿಭುವನ್ ಸಿಂಗ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೃಷಿ ಸಚಿವ ಶರದ್ ಪವಾರ್ ಅವರಿಗೆ ತಿಂಗಳ ಹಿಂದೆ ಕಪಾಲಮೋಕ್ಷ ಮಾಡಿದ್ದ ತೇಜಿಂದರ್ ಸಿಂಗ್ ಬಗ್ಗಾ ಸಹ ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿ ಕಂಡುಬಂದಿದ್ದ.

ಬಿಜೆಪಿ ಹತಾಶೆ: ಸೋನಿಯಾ ಪೋಸ್ಟರಿಗೆ ಮಸಿ ಚೆಲ್ಲಿರುವ ಘಟನೆಯ ಹಿಂದೆ ಬಿಜೆಪಿ ಕೈವಾಡವಿದೆ. ಐದು ರಾಜ್ಯಗಳಲ್ಲಿ ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಹತಾಶೆಯಿಂದ ಇಂತಹ ಕೃತ್ಯಕ್ಕೆ ಕುಮ್ಮಕ್ಕು ನೀಡಿದೆ ಎಂದು ಕಾಂಗ್ರೆಸ್ ಹೇಳಿದೆ.

ಯುವ ಭಾರತ್ ಕಿಸಾನ್ ಪಂಚಾಯತ್' ಹೆಸರಿನ ಕೆಲವು ಜನರು ಸೇರಿದ್ದು, ಮೂರು ದಿನಗಳ ಹಿಂದೆ (ಜ.14) ರಾಮ್‌ದೇವ್ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದರು. ಬಳಿಕ ಕೆಲವರು ಸೋನಿಯಾ ಗಾಂಧಿ ಪೋಸ್ಟರ್ ಮೇಲೆ ಮಸಿ ಬಳಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಅವರು ಘರ್ಷಣೆಗೂ ಇಳಿದರು.

ರಾಜಧಾನಿಯಲ್ಲಿ ಅಕ್ಬರ್ ರಸ್ತೆಯಲ್ಲಿನ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ಮುಂಭಾಗದಲ್ಲಿದ್ದ ನಡೆದಿರುವ ಈ ಘಟನೆಯನ್ನು ರಾಮ್‌ದೇವ್ ಖಂಡಿಸಿದ್ದು, ಇದೊಂದು ಪ್ರಜಾಪ್ರಭುತ್ವ ವಿರೋಧಿ ನೀತಿ ಮತ್ತು ಅನಾಗರಿಕ ವರ್ತನೆ ಎಂದಿದ್ದಾರೆ.

English summary
According ti reports supporters of popular yoga guru Baba Ramdev threw black ink on Congress President Sonia Gandhi's poster outside the headquarters of Congress Party in the capital on Monday, Jan 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X