ಜ.30: ಯಡ್ಡಿ ಭಾರತಿ ಶೆಟ್ಟಿಗೆ ಕೊಟ್ಟ ಸೈಟು ಪ್ರಕರಣ ತೀರ್ಪು

ಪ್ರಕರಣ ಕುರಿತ ವಾದ-ಪ್ರತಿವಾದ ಆಲಿಸಿದ ನ್ಯಾ.ಎನ್.ಕೆ.ಸುಧೀಂದ್ರ ರಾವ್, ಆದೇಶವನ್ನು ಜ.30ರಂದು ಪ್ರಕಟಿಸುವುದಾಗಿ ತಿಳಿಸಿ, ವಿಚಾರಣೆ ಮುಂದೂಡಿದ್ದಾರೆ.
ಸಿರಾಜಿನ್ ಬಾಷಾ ಪರ ವಾದ ಮಾಡಿದ ವಕೀಲ ನಿತಿನ್, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ ವೇಳೆ ತಮ್ಮ ಪುತ್ರರ ಒಡೆತನದ ಧವಳಗಿರಿ ಪ್ರಾಪರ್ಟೀಸ್‌ಗೆ ಹಣ ನೀಡಿದ ಪ್ರಕಾಶ್ ಶೆಟ್ಟಿಗೆ ನಗರದ ವಿವಿಧೆಡೆ 3 ಎಕರೆ 35 ಗುಂಟೆ ಜಾಗವನ್ನು ಕಾನೂನು ಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ.
ನಗರದ ಶ್ರೀರಾಂಪುರದಲ್ಲಿ ಬಿ.ಆರ್.ಶೆಟ್ಟಿಗೆ 11 ಎಕರೆ ಡಿನೋಟಿಫೈ ಮಾಡಲಾಗಿದ್ದು, ಆ ಭೂಮಿ ಪೈಕಿ 2 ಎಕರೆಯನ್ನು ಬಿಎಸ್‌ವೈ ಮಕ್ಕಳ ಕಂಪೆನಿಯ ನಿಕಟವರ್ತಿಯಾದ ಬೆಸ್ಟೋ ಕಂಪೆನಿಗೆ ವರ್ಗಾವಣೆ ಮಾಡಲಾಗಿದೆ.
ಅಲ್ಲದೆ ಶಾಸಕಿ ಭಾರತಿ ಶೆಟ್ಟಿ ಮತ್ತು ಸಂಸದ ಬಿ.ವೈ.ರಾಘವೇಂದ್ರಗೆ ನಗರದ ಆರ್‌ಎಂವಿ ಲೇಔಟ್‌ನಲ್ಲಿ ನಿವೇಶನ ಹಂಚಿದ್ದಾರೆ ಎಂದು ಆರೋಪಿಸಿದರು.
ಪ್ರಮುಖ ಸಂಗತಿಯೆಂದರೆ, ಭೂಮಿಯನ್ನು ಒಬ್ಬರ ಹೆಸರಿಗೆ ಮಂಜೂರು ಮಾಡಿ, ಬಳಿಕ ಬೇರೊಬ್ಬರಿಗೆ ವರ್ಗಾವಣೆ ಮಾಡಲಾಗಿದೆ. ಡಿನೋಟಿಫಿಕೇಷನ್ ಮಾಡುವಂತೆ ಶಾಸಕ ಕೃಷ್ಣಯ್ಯ ಶೆಟ್ಟಿ ಪ್ರಸ್ತಾಪ ಸಲ್ಲಿಸಿದ ಕೂಡಲೆ ಬಿಎಸ್‌ವೈ ಡಿನೋಟಿಫಿಕೇಷನ್ ಮಾಡಿದ್ದಾರೆ. ಇದರಿಂದಾಗಿ ಪ್ರಕರಣದಲ್ಲಿ ಅಧಿಕಾರ
ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆರೊಪಿಗಳಿಗೆ ಸಮನ್ಸ್ ಜಾರಿ ಮಾಡಲು ಇದು ಸೂಕ್ತ ಪ್ರಕರಣವಾಗಿದ್ದು, ಎಲ್ಲ ಆರೋಪಿಗಳಿಗೆ ಸಮನ್ಸ್ ನೀಡುವಂತೆ ವಕೀಲ ನಿತಿನ್ ಕೋರ್ಟ್‌ನ್ನು ಕೋರಿದರು.
ಸಿರಾಜಿನ್ ಬಾಷಾ ದಾಖಲಿಸಿದ್ದ ಮೊದಲನೆ ದೂರಿನ ಸಂಬಂಧ ಯಡಿಯೂರಪ್ಪ ಸೇರಿದಂತೆ
ಉಳಿದ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡುವ ಕುರಿತ ವಿಚಾರಣೆಯನ್ನು ನ್ಯಾಯಾಧೀಶರು
ಸೋಮವಾರಕ್ಕೆ ಮುಂದೂಡಿದರು.












Click it and Unblock the Notifications