ನನ್ನನ್ನು ಬೆಳೆಸಿದ್ದೇ ಯಡಿಯೂರಪ್ಪ: ಈಶ್ವರಪ್ಪ
ದೇವದುರ್ಗ,
ಜ14: 'ರಾಜಕೀಯವಾಗಿ ನನ್ನನ್ನು ಬೆಳೆಸಿದ್ದೇ ಯಡಿಯೂರಪ್ಪನವರು. ಈ ಸ್ಥಾನಕ್ಕೆ ಬರಲು ಅವರೇ ಕಾರಣ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದರು. ಯಡಿಯೂರಪ್ಪ ನನ್ನನ್ನು ರಾಜಕೀಯವಾಗಿ ಬೆಳೆಸದಿದ್ದರೆ ಈ ವೇದಿಕೆಯಲ್ಲಿ ನಾನು ಇರುತ್ತಿರಲಿಲ್ಲ. ಅವರು ನನ್ನನ್ನು ಬೆಳೆಸಿದರೆ, ಸಂಘ ಪರಿವಾರ ಗುರುತಿಸಿ ಸ್ಥಾನಮಾನ ನೀಡಿದೆ ಎಂದು ನುಡಿದರು. id="toptextpromo">ಮೂರು
ದಿನ ನಡೆಯುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದ ಅಂಗವಾಗಿ 1008 ದೇವ ದುಂದುಭಿ ಸಮಾವೇಶಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಇದೇ ವೇಳೆ, ಮಡೆಸ್ನಾನ ಅನಿಷ್ಠ ಪದ್ಧತಿ ಅದನ್ನು ನಾನು ಖಂಡಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಜಾತಿ
ವ್ಯವಸ್ಥೆಯನ್ನು ರಾಜಕಾರಣಿಗಳು ವ್ಯವಸ್ಥಿತವಾಗಿ ಜಾರಿಯಲ್ಲಿ ಇಟ್ಟಿದ್ದಾರೆ. ಜಾತಿ ಸಂಘರ್ಷ ಸೃಷ್ಟಿಸಿ ಅಧಿಕಾರ ಪಡೆಯುತ್ತಿದ್ದಾರೆ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಇಂತ ರಾಜಕಾರಣಿಗಳು ಇದ್ದಾರೆ. ಇಂತವರನ್ನು ಗುರುತಿಸಿ ದೂರ ಅಟ್ಟಬೇಕಾಗಿದೆ ಎಂದರು.











Click it and Unblock the Notifications