ರಾಜು ಅನಂತಸ್ವಾಮಿ ನೆನಪಲ್ಲಿ ಸಂಗೀತ ಸಂಜೆ

Raju Ananthaswamy
ಬೆಂಗಳೂರು, ಜ.14: ಕರ್ನಾಟಕ ಕಂಡ ಪ್ರತಿಭಾವಂತ ಗಾಯಕ, ಸಂಗೀತ ಸಂಯೋಜಕ, ನಟ, ಬಹುಮುಖ ಪ್ರತಿಭೆಯಾಗಿದ್ದ 'ರಾಜು ಅನಂತಸ್ವಾಮಿ' ಕೇವಲ ಹೆಸರಲ್ಲ, ಒಂದು ಅನುಭವ; ನೆನಪಿಗೆ ಮೀರಿದ ಅನುಭವ.

ರಾಜು ಅನಂತಸ್ವಾಮಿ ನಮಗಾಗಿ ಹಾಡಿದ ಹಾಗೂ ಅವರು ಇಷ್ಟಪಟ್ಟು ಹಾಡುತ್ತಿದ್ದ ಹಾಡುಗಳ ಮೂಲಕ ಅವರನ್ನು ನೆನೆಯುವ ಸಲುವಾಗಿ ಕಲೆ ತಂಡ ಹಲವು ಗೆಳೆಯರೊಂದಿಗೆ ಸೇರಿ 'ನೆನಪಿಗೆ ಮೀರಿದ್ದು" ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ರಾಜು ಅನಂತಸ್ವಾಮಿಯವರ ಕೆಲವು ಶಿಷ್ಯರು, ಆಪ್ತ ಕಲಾವಿದರು ಹಾಡಲಿದ್ದು, ಇದಕ್ಕೆ ಜೊತೆಯಾಗಿ ಅವರ ಜೊತೆಗೆ ವಾದ್ಯಗಳನ್ನು ನುಡಿಸುತ್ತಿದ್ದ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ.

ದಿನಾಂಕ: 17 ಜನವರಿ 2012
ಸ್ಥಳ: ಕೆ.ಎಚ್.ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ, ಬೆಂಗಳೂರು
ಸಂಜೆ:7.30 ರಿಂದ
ಪ್ರಸ್ತುತಿ: ಕಲೆ ತಂಡ ಹಾಗು ಗೆಳೆಯರು

ಹಾಡಿನಲ್ಲಿ: ಸುಜಯ್ ಶಾಸ್ತ್ರಿ, ಪ್ರದೀಪ್ ಬಿ ವಿ, ಸ್ಮಿತಾ ವಸಂತ್, ಮಧುಮಾಲ, ಪ್ರವೀಣ್ ಬಿ ವಿ ಹಾಗೂ ರಾಜು ಅನಂತಸ್ವಾಮಿಯವರೊಂದಿಗೆ ಹಾಡಿರುವ, ಅವರ ಬಳಿ ಕಲಿತಿರುವ ಅತಿಥಿ ಗಾಯಕರು.

ಗಿಟಾರ್: ಸುದರ್ಶನ್
ರಿದಂ ಪ್ಯಾಡ್ : ಜೆರಾಲ್ಡ್
ಕೀಬೋರ್ಡ್ : ಕೃಷ್ಣ ಉಡುಪ
ತಬಲ: ಎಂ.ಸಿ.ಶ್ರೀನಿವಾಸ್
ಕೊಳಲು: ವಸಂತ್

ಆಹ್ವಾನಿತರು: ಈ ಕಾರ್ಯಕ್ರಮಕ್ಕೆ ರಾಜು ಅನಂತಸ್ವಾಮಿಯವರ ಒಡನಾಟದಲ್ಲಿದ್ದ ಹಲವು ಗೆಳೆಯರನ್ನು ಆಹ್ವಾನಿಸಲಾಗಿದೆ. ಅವರು ರಾಜು ಅನಂತಸ್ವಾಮಿಯವರ ಜೊತೆಗಿನ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.

ಕಾರ್ಯಕ್ರಮ ಸಹಯೋಗ: ಲಹರಿ ಆಡಿಯೋ ಸಂಸ್ಥೆ ಹಾಗು ಸಂವಾದ ಡಾಟ್ ಕಾಂ(samvaada.com)

ಹೆಚ್ಚಿನ ವಿವರಗಳಿಗೆ ವಿನಯ್ ಶೇಷಾದ್ರಿ(ಕಲೆ ತಂಡದ ನಿರ್ದೇಶಕ)ಯನ್ನು 98860 84111 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+