ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಗಾರಿಕೆ ನಿಷೇಧ, 4000 ಕೋಟಿ ರು ನಷ್ಟ

By Mahesh
|
Google Oneindia Kannada News

Mining Ban loss to Railway
ಬೆಂಗಳೂರು, ಜ.14: ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ನಿಷೇಧಕ್ಕೆ ಸುಪ್ರೀಂ ಕೋರ್ಟು ಆದೇಶ ಹೊರಡಿಸಿದ ದಿನದಿಂದ ರೈಲ್ವೇ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಗಣಿಗಾರಿಕೆ ನಿಲ್ಲಿಸಿರುವುದರಿಂದ ಕರ್ನಾಟಕಕ್ಕೆ ಸುಮಾರು 4000 ಕೋಟಿ ರು ನಷ್ಟ ಹಾಗೂ 1.5 ಲಕ್ಷ ಮಂದಿ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ.

ಕಬ್ಬಿಣ ಉಕ್ಕು ವಲಯದಿಂದ ರೈಲ್ವೇ ಇಲಾಖೆಗೆ ಬರುತ್ತಿದ್ದ ಆದಾಯ ಶೇ.7.1ರಷ್ಟು ಇಳಿಮುಖ ಕಂಡು 5,238 ಕೋಟಿ ರು ಮಾತ್ರ ದಾಖಲಾಗಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ(ಏಪ್ರಿಲ್ ನಿಂದ ನವೆಂಬರ್ ವರೆಗೆ) 5,640 ಕೋಟಿ ರು ಗಳಿಕೆಯಾಗಿತ್ತು.

2009-10ರಲ್ಲಿ ಇಲಾಖೆ ಬಳ್ಳಾರಿಯಿಂದ 23 ಮಿಲಿಯನ್ ಟನ್ ಕಬ್ಬಿಣದ ಅದಿರನ್ನು ಸಾಗಾಟ ಮಾಡಲಾಗಿತ್ತು. 2010-11 ರಲ್ಲಿ ಈ ಸಂಖ್ಯೆ 16 ಮಿಲಿಯನ್ ಟನ್ ಗಳಿಗೆ ಕುಸಿತವಾಗಿದೆ.

ರಾಜ್ಯದಲ್ಲಿ ವಾರ್ಷಿಕ 42 ಮಿಲಿಯನ್ ಟನ್ ಗಳಷ್ಟು ಕಬ್ಬಿಣದ ಅದಿರು ಉತ್ಪಾದನೆ ಆಗುತ್ತಿದ್ದು ಇದರಲ್ಲಿ ಬಳ್ಳಾರಿಯ ಪಾಲು 35 ಮಿಲಿಯನ್ ಟನ್ ಗಳಾಗಿವೆ. ಗಣಿಗಾರಿಕೆ ನಿಷೇಧದಿಂದ ರೇಲ್ವೇ ಇಲಾಖೆಗೆ 2010 ರಲ್ಲಿ 1071 ಕೋಟಿ ರೂಪಾಯಿಗಳಷ್ಟು ಆದಾಯ ನಷ್ಟ ಅನುಭವಿಸಿತ್ತು.

ಪ್ರಸಕ್ತ ವರ್ಷ ಅದಿರು, ಖನಿಜ ರಫ್ತು ಪ್ರಮಾಣ 65 ಮಿಲಿಯನ್ ಟನ್ ಮುಟ್ಟುವ ನಿರೀಕ್ಷೆಯಿದೆ. ಕಳೆದ ವರ್ಷ ಈ ಪ್ರಮಾಣ 97 ಮಿಲಿಯನ್ ಟನ್ ನಷ್ಟಿತ್ತು. ರಫ್ತು ತೆರಿಗೆಯನ್ನು ಶೇ.30ರಷ್ಟು ಹೆಚ್ಚಿಸುವ ಸರ್ಕಾರದ ಪ್ರಸ್ತಾಪದಿಂದಾಗಿ ರಫ್ತು ಪ್ರಮಾಣ 50 ಮಿಲಿಯನ್ ಟನ್ ಗಳಿಗೆ ಇಳಿಯುವ ನಿರೀಕ್ಷೆಯಿದೆ.

English summary
Mining crisis in Karnataka has effected Indian railways badly. Iron ore mining and transport ban created adverse effect on steel sector. Overall exports of the mineral come down to 65 million tonne (mt) this fiscal. With increase of 30 per cent export duty exports forecast further down to 50 mt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X