ಎನ್ ಡಿಟಿವಿ ಹಿಂದೂ ವಾಹಿನಿ ಡೈಲಿತಂತಿ ಪಾಲಿಗೆ?

2009 ರ ಮಧ್ಯ ಭಾಗದಲ್ಲಿ ರಾಷ್ಟ್ರದ ಪ್ರಮುಖ ಸುದ್ದಿ ವಾಹಿನಿ ಎನ್‌ಡಿ ಟಿವಿ ಹಾಗೂ ಚೆನ್ನೈ ಮೂಲದ ದಿನ ಪತ್ರಿಕೆ ಹಿಂದು ಸಮಪಾಲಿನ ಸಹಯೋಗದಲ್ಲಿ ಎನ್‌ಡಿ ಟಿವಿ - ಹಿಂದು ಚಾನೆಲ್ ಸ್ಥಾಪಿಸಲಾಗಿತ್ತು.
ಈ ಚಾನೆಲ್ ಗೆ ವೀಕ್ಷಕರ ಕೊರತೆ ಹಾಗೂ ಜಾಹೀರಾತು ಆದಾಯ ಕಡಿಮೆ ಪ್ರಮಾಣದಲ್ಲಿತ್ತು. ಚೆನ್ನೈನಲ್ಲಿ ತಮಿಳಿನ ನೂರಕ್ಕೂ ಹೆಚ್ಚು ಚಾನೆಲ್ ಗಳಿದ್ದು ಇಲ್ಲಿ ಸ್ಪರ್ದೆ ಕಷ್ಟವಾಗಿದ್ದು ಅದರಲ್ಲೂ ಇಂಗ್ಲೀಷ್ ಚಾನೆಲ್ ಗೆ ಅವಕಾಶ ಕಡಿಮೆ ಎಂಬುದನ್ನು ಅರಿತ ಎರಡೂ ಸಂಸ್ಥೆಗಳು ಮಾರಾಟಕ್ಕೆ ಮುಂದಾಗಿದ್ದವು.
ಎನ್ ಡಿಟಿವಿ ಒಟ್ಟು ಶೇ.51ರಷ್ಟು ಪಾಲು ಹಾಗೂ ದಿ ಹಿಂದೂ ಶೇ 49ರಷ್ಟು ಪಾಲು ಹೊಂದಿತ್ತು. ಈಗ ಈ ನಗರ ಕೇಂದ್ರಿತ ಇಂಗ್ಲೀಷ್ ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳ ವಾಹಿನಿಯನ್ನು ಡೈಲಿ ತಂತಿ ಸಂಸ್ಥೆ ಉದ್ಯಮಿ ಬಿ ಸಿವಂತಿ ಆದಿತ್ಯನ್ ಅವರು ಕೇವಲ 15 ಕೋಟಿ ರು ನೀಡಿ ಪಡೆದಿದ್ದಾರೆ ಎನ್ನಲಾಗಿದೆ.












Click it and Unblock the Notifications