ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮು ಕ್ಯಾಮೆರಾ ಕಣ್ಣಲ್ಲಿ ನಿಸರ್ಗ ರಮಣೀಯತೆ

By Mahesh
|
Google Oneindia Kannada News

Wildfire Photography Show, Bangalore
ಎಂ. ರಾಮು-ನಮ್ಮ ನಡುವಿನ, ಅತಿ ಕಿರಿಯ ವಯಸ್ಸಿನಲ್ಲೇ ವನ್ಯಜೀವಿ ಛಾಯಾಗ್ರಾಹಣದಲ್ಲಿ ಹಿರಿದಾದುದನ್ನ ಸಾಧಿಸುತ್ತಿರುವ ಸಾಧಕ. ಅವರು ತೆಗೆದ ಚಿತ್ರ ಪ್ರದರ್ಶನದ ಚಿತ್ರಕಲಾ ಪರಿಷತ್ ನಲ್ಲಿ ಜ.15-19ರ ತನಕ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ. ಇಲ್ಲಿ ಅಪ್ರತಿಮ ಪ್ರತಿಭಾವಂತನ ಕಿರು ಪರಿಚಯ.

ಪ್ರತಿಷ್ಟಿತ ಪತ್ರಿಕೆಯೊಂದರಲ್ಲಿ ಪುಟ ಸಂಯೋಜನೆ ಮಾಡುತ್ತಲೇ ಕನಸುಗಣ್ಣಿನ ಈ ಯುವಕ ಛಾಯಾಚಿತ್ರ ಜಗತ್ತಿನ ಮೇರುಗಿರಿಗಳನ್ನ ಮುಟ್ಟುವ ಕನಸುಗಳನ್ನು ಕಟ್ಟಲಾರಂಭಿಸಿದ. ದಿನ ಕಳೆದಂತೆ ಆ ಕನಸುಗಳು ಬರಿ ಹಗಲುಗನಸುಗಳಾಗಿ ಉಳಿಯಲಿಲ್ಲ.

ಯಶಸ್ಸಿನ ಮೆಟ್ಟಿಲುಗಳು ಆತನ ಪಾಲಿಗೆ ಒಂದೊಂದಾಗಿ ತೆರೆದುಕೊಳ್ಳಲಾರಂಭಿಸಿದವು. ಒಂದೊಂದೇ ಪ್ರಶಸ್ತಿಗಳು ಆತನ ಕಪಾಟನ್ನು ಭರ್ತಿ ಮಾಡತೊಡಗಿದವು, ಹಾಗೇ ಆತನಲ್ಲಿ ಮತ್ತಷ್ಟು ಕನಸುಗಳನ್ನೂ, ಇನ್ನಷ್ಟು ಹುಮ್ಮಸ್ಸನ್ನೂ ಬಿತ್ತಿದವು. ಕಳೆದ 2011ನೇ ವರ್ಷವಂತೂ ಸುಗ್ಗಿಯೋ ಸುಗ್ಗಿ. ಎರಡೆರಡು ಅಂತರ್ರಾಷ್ಟ್ರೀಯ ಮಾನ್ಯತೆಗಳು ಒಂದೇ ವರುಷದಲ್ಲಿ ಮುಡಿಗೇರಿದ ಸಂಭ್ರಮ.

ಮುಂದಿನ ಪೀಳಿಗೆಗೆ ಒಂದಿಷ್ಟು ನಿಸರ್ಗದ ಕೌತುಕಗಳನ್ನು ಪರಿಚಯಿಸುವ ಹಂಬಲ ಹೊತ್ತು ಈ ಕ್ಷೇತ್ರದಲ್ಲಿ ತನ್ನೆಲ್ಲಾ ಬಿಡುವಿನ ವೇಳೆಯನ್ನು ಮುಡುಪಿಟ್ಟಿದ್ದಾರೆ. 2005ರಲ್ಲಿ ಕುತೂಹದಿಂದ ಛಾಯಾಚಿತ್ರಗಳನ್ನು ಗಮನಿಸಲಿಕ್ಕೆ ಶುರುಮಾಡಿದ ಇವರು ಇಂದು ತಮ್ಮ ಕೈಚಳಕದಿಂದ ಅತ್ಯಾಕರ್ಷಕ ಚಿತ್ರಗಳನ್ನು ಮೂಡಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಇದೂವರೆಗೂ ಅವರ 350ಕ್ಕೂ ಹೆಚ್ಚು ವನ್ಯಜೀವಿ ಛಾಯಚಿತ್ರಗಳು ಯು.ಕೆ., ಜರ್ಮನಿ, ಕೆನಡಾ, ಫ್ರಾನ್ಸ್, ಫಿನ್ಲ್ಂಡ್ ಮುಂತಾದ ದೇಶ-ವಿದೇಶಗಳಲ್ಲಿ ಪ್ರದರ್ಶನಗೊಂಡು ವಿವಿಧ ಪ್ರಶಸ್ತಿ ಮನ್ನಣೆಗಳನ್ನು ಪಡೆದಿವೆ.

ಪ್ರತಿಯೊಬ್ಬ ಹವ್ಯಾಸಿ ಛಾಯಾಗ್ರಾಹಕನ ಕನಸು ಇಂಗ್ಲೇಂಡಿನ ರಾಯಲ್ ಫೋಟೊಗ್ರಫಿಕ್ ಸೊಸೈಟಿ (RPS) ಮತ್ತು ಪ್ಯಾರಿಸ್ಸಿನ ಫೆಡೆರೇಷನ್ ಇಂಟರ್‌ನಾಷನಲ್ ಡಿ" ಆರ್ಟ್ ಫೋಟೊಗ್ರಫಿ(FIAP) ಯ ಮನ್ನಣೆ ಗಳಿಸಿಕೊಳ್ಳುವುದು. ಈ ಎರಡೂ ಸಂಸ್ಥೆಗಳ ಅಸೋಸಿಯೇಟ್‌ಶಿಪ್ ಮನ್ನಣೆಗಳನ್ನು ಒಂದೇ ವರ್ಷದಲ್ಲೇ ಪಡೆದದ್ದು ರಾಮು ಅವರ ಹೆಗ್ಗಳಿಕೆ.

2010ರಲ್ಲಿ ಯೂತ್ ಫೋಟೊಗ್ರಫಿಕ್ ಸೊಸೈಟಿಯ ಆಸ್ಕರಿ ಅವಾರ್ಡ್ ಮತ್ತು ಕಲ್ಕತ್ತದ ಫೆಡೆರೇಷನ್ ಇಂಡಿಯನ್ ಫೋಟೊಗ್ರಫಿ ಯ ಸದಸ್ಯತ್ವ ಇವರ ಸಾಧನೆಗೆ ಸಂದ ಗೌರವಗಳು.

ಇವರಿಗೆ ದೊರೆತ ಇತರೆ ಮನ್ನಣೆಗಳೆಂದರೆ,

* 2009ರಲ್ಲಿ ಕರ್ನಾಟಕ ಫೋಟೊಗ್ರಫಿಕ್ ಅಸೋಸಿಯೇಷನ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ 2ನೇ ಬಹುಮಾನ.
* ಕೇರಳದಲ್ಲಿ ನೆಡೆದ ಆಲ್ ಇಂಡಿಯಾ ನೇಚರ್ ಫೊಟೊಗ್ರಫಿ ಸ್ಪರ್ಧೆಯಲ್ಲಿ 3ನೇ ಬಹುಮಾನ.
*2010 ರಲ್ಲಿ ಸಾಗರ ಫೋಟೊಗ್ರಫಿಕ್ ಕ್ಲಬ್ಬಿನ ರಾಜ್ಯಮಟ್ಟದ ಬಹುಮಾನ.
* ಕಲ್ಕತ್ತದಲ್ಲಿ ನೆಡೆದ PAB Indian Digital salon 2010ನಲ್ಲಿ ಬಹುಮಾನ
* Best Bird Southampton International photography, International Level in UK SCC certifi cate.
* ಮಧ್ಯಪ್ರದೇಶದ ಅಂತರ್ರಾಷ್ಟ್ರೀಯ ಮಟ್ಟದ Photo lovers 2010, ನಲ್ಲಿ ಚಿನ್ನದ ಪದಕ.
* 4th International Salon – CELJE 2010, Slovenia PSA ನಲ್ಲಿ ಖಂಚಿನ ಪದಕ.
* ಅಂತರ್ರಾಷ್ಟ್ರೀಯ ಮಟ್ಟದ Grand Digital Circuit 2011, FIAP HM INDIA Print Circuit ನಲ್ಲಿ ಅರ್ಹತಾ ಪತ್ರ, ಮುಂತಾದವು

ವನ್ಯಜೀವಿ ಮತ್ತು ನಿಸರ್ಗದ ಚೆಲುವನ್ನೆಲ್ಲಾ ತಮ್ಮ ಕ್ಯಾಮೆರಾದಲ್ಲಿ ತುಂಬಿ ಕಾವ್ಯಾತ್ಮಕ ಛಾಯಾಚಿತ್ರ ರಚಿಸುವುದು ಅವರ ಕುಶಲತೆಗೆ ಹಿಡಿದ ಕನ್ನಡಿ.

ಅವರ ಬತ್ತಳಿಕೆಯಲ್ಲಿರು ಈ ಚೆಲುವಾದ ಚಿತ್ರಗಳ ಪ್ರದರ್ಶನ ಚಿತ್ರಕಲಾ ಪರಿಷತ್ತಿನಲ್ಲಿ ಇದೇ ಜನವರಿ 15ರಿಂದ 19ರ ವರೆಗೆ ನೆಡೆಯಲಿದೆ. ಪ್ರಕೃತಿ ಪ್ರೇಮಿಗಳಿಗೆ, ನಿಸರ್ಗವನ್ನು ಆರಾಧಿಸುವ ಆಸಕ್ತರಿಗೆ, ಶಾಲಾ ಮಕ್ಕಳಿಗೆ, ಈ ಐದೂ ದಿನ ಮನತಣಿಸುವ ಚಿತ್ರಗಳ ನೋಡುವ ಹಾಗೂ ರಾಮು ಅವರೊಂದಿಗೆ ಅವರ ವಿಚಾರಧಾರೆಗಳಿಗೆ ಸ್ಪಂದಿಸುವ ಅವಕಾಶ.

ಹಿರಿಯ ಛಾಯಾಚಿತ್ರಗ್ರಾಹಕ ಬಿ. ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಮುನ್ನೆಡೆಯುತ್ತಿರುವ ರಾಮು ಅವರಿಗೆ ಇನ್ನಷ್ಟು ಸಾಧಿಸುವ ಅವಕಾಶಗಳು ಒದಗಿ ಬರುತ್ತಿರಲಿ ಎನ್ನುವುದೇ ಸಂವಾದ ತಂಡದ ಆಶಯ.

ಚಿತ್ರ ಪ್ರದರ್ಶನದ ವಿವರಗಳು:

ಸ್ಥಳ : ಚಿತ್ರಕಲಾ ಪರಿಷತ್ತು,
ದಿನಾಂಕ : 15-19 ಜನವರಿ 2012.
ಪ್ರವೇಶ : ಉಚಿತ.

ರಾಮು ಅವರ ಜಾಲತಾಣ ವಿಳಾಸ : https://www.facebook.com/Wild.Frames
ಸಂಪರ್ಕ : 94804 27376

ಮಿಂಚೆ : [email protected]

English summary
M Ramu's 1st WILDLIFE Photography Exhibition is on 15 to 19th Jan 2012. at Chitra Kala Parshiat, Bangalore. Brief note on M Ramu's photography passion and his achievement such as ARPS - Associateship of 'The Royal Photographic Society', London 2011. Ramu also made exhibition Over 350 wildlife and nature picture have been exhibited in National and International Salons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X