ಮುಖ್ಯಮಂತ್ರಿ ಸದಾನಂದ ಗೌಡರಿಗೆ 'ಗೋವಿನ ಕತೆ'

ಆದರೆ, ನಾನು ಯಾರಿಗೂ ಮಾತು ಕೊಟ್ಟಿಲ್ಲ, ಹೈಕಮಾಂಡ್ ಸೂಚನೆಯಂತೆ ನಾನು ಮುಖ್ಯಮಂತ್ರಿಯಾಗಿದ್ದೇನೆ ಯಾರ ಕುರ್ಚಿಯನ್ನು ನಾನು ಕಿತ್ತುಕೊಂಡಿಲ್ಲ ಎಂದು ಮುಖ್ಯಮಂತ್ರಿ ಸದಾನಂದ ಗೌಡರು ಚಿಕ್ಕಮಗಳೂರಿನಲ್ಲಿ ಭಾನುವಾರ ಹೇಳಿದ್ದಾರೆ.
ಕೊಟ್ಟ ಮಾತು ಯಾವುದು ಎಂಬುದನ್ನು ಹೇಳದ ರೇಣುಕಾಚಾರ್ಯ, ಬಿಎಸ್‌ವೈಗೆ ಮುಖ್ಯಮಂತ್ರಿ ನೀಡಿ, ರಾಜ್ಯಾಧ್ಯಕ್ಷ ಸ್ಥಾನ ಬೇಡ. ಮುಖ್ಯಮಂತ್ರಿ ಸ್ಥಾನವೇ ಬೇಕು ಎಂದು ಮತ್ತೆ ಹಳೇ ಬೇಡಿಕೆಯನ್ನು ಮುಂದಿಟ್ಟರು.
ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿದ್ದಾರೆ. ಜನರು ಯಡಿಯೂರಪ್ಪನವರ ಮುಖ ನೋಡಿ ಮತ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಈಶ್ವರಪ್ಪ ಯಾವುದೇ ಭಿನ್ನಮತವಿಲ್ಲ. ಯಾರೋ ಆಗದೆ ಇರುವವರು ಇಬ್ಬರ ಮಧ್ಯೆ ವೈಮನಸ್ಯ ಹುಟ್ಟು ಹಾಕಿದ್ದಾರೆ ಎಂದರು.
ಯಡಿಯೂರಪ್ಪ ಹಾಗೂ ಈಶ್ವರಪ್ಪ ಮೈತ್ರಿ ಕದಡಿದವರು ಯಾರು ಎಂಬ ಪ್ರಶ್ನೆಗೆ ಕಾಲ ಬಂದಾಗ ಉತ್ತರ ದೊರೆಯಲಿದೆ ಎಂದು ಹೇಳಿ ರೇಣುಕಾಚಾರ್ಯ ಹೊರಟರು.












Click it and Unblock the Notifications