ಸಂದರ್ಶನಕ್ಕೆ ಬಂದ ಮಹಿಳೆ ರೇಪ್ ಮಾಡ್ಬಿಟ್ಟರು

Married Woman rape, Noida
ನವದೆಹಲಿ/ನೋಯ್ಡಾ, ಜ.8: ರಾಜಧಾನಿ ದೆಹಲಿ ವಲಯ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ ಎಂಬ ಆರೋಪ ಮತ್ತೊಮ್ಮೆ ಸಾಬೀತಾಗಿದೆ. ಉದ್ಯೋಗ ಸಂದರ್ಶನಕ್ಕೆ ಬಂದ ವಿವಾಹಿತ ಮಹಿಳೆಯನ್ನು ಇಬ್ಬರು ಅತ್ಯಾಚಾರಗೈದಿರುವ ಘಟನೆ ನಡೆದಿದೆ.

ಲೋನಿ ರಸ್ತೆ ಪ್ರದೇಶದ ನಿವಾಸಿಯಾಗಿರುವ ಮಹಿಳೆ ಶುಕ್ರವಾರ ಖಾಸಗಿ ಸಂಸ್ಥೆಯೊಂದಕ್ಕೆ ಉದ್ಯೋಗ ಸಂದರ್ಶನಕ್ಕಾಗಿ ಹೋಗಿದ್ದಳು. ಈ ಸಂದರ್ಭದಲ್ಲಿ ಆಕೆ ಮೇಲೆ ಅತ್ಯಾಚಾರ ನಡದಿದೆ. ಮಹಿಳೆ ದೂರು ನೀಡಿದ ಮೇಲೆ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆ ವರದಿ ಪ್ರಕಾರ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೂರ್ವ ದೆಹಲಿಯ ಶಕರ್ ಪುರದಲ್ಲಿರುವ ಉದ್ಯೋಗ ಸಂಸ್ಥೆಯೊಂದರ ಮೂಲಕ ನೋಯ್ಡಾದಲ್ಲಿರುವ ಸಂಸ್ಥೆಗೆ ಸಂದರ್ಶನಕ್ಕಾಗಿ ಮಹಿಳೆ ತೆರಳಿದ್ದಳು.

ಆದರೆ, ಸಂಸ್ಥೆ(placement counsellor ) ಹೇಳಿದ ಸ್ಥಳಕ್ಕೆ ಹೋದರೆ ಅಲ್ಲಿ ಸಂದರ್ಶನ ನಡೆಸುವ ಯಾವ ಕುರುಹುಗಳು ಕಾಣಿಸಲಿಲ್ಲ. ಮಹಿಳೆ ಗಾಬರಿಯಾಗಿ ಹಿಂತಿರುಗುವ ಯತ್ನದಲ್ಲಿದ್ದಾಗ, ಇಬ್ಬರು ವ್ಯಕ್ತಿಯನ್ನು ಆಕೆಯನ್ನು ತಮ್ಮ ಖೆಡ್ಡಾದಲ್ಲಿ ಬೀಳಿಸಿಕೊಂಡು ಅನುಭವಿಸಿದ್ದಾರೆ. ಉದ್ಯೋಗ ಸಂಸ್ಥೆ ಬಾಗಿಲು ಮುಚ್ಚಲಾಗಿದೆ.ತನಿಖೆ ಜಾರಿಯಲ್ಲಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+