ರಸ್ತೆ ನಿಯಮ ಗಾಳಿಗೆ ತೂರಿದರೆ ಹುಷಾರ್ : ಅಶೋಕ್

ನಗರದಲ್ಲಿ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶದಲ್ಲಿ ಅಶೋಕ್, ಸಾರ್ವಜನಿಕರು ರಸ್ತೆ ನಿಯಮಗಳನ್ನು ಪಾಲಿಸಿ ಸಂಚಾರಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ನುಡಿದರು. ಗ್ರಾಹಕರನ್ನು ಕಡೆಗಣಿಸುವ ರಿಕ್ಷಾ ಚಾಲಕರನ್ನೂ ಅಶೋಕ್ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಕೂಡ ಭಾಗವಹಿಸಿದ್ದರು. ಈ ಸುಪ್ತಾಹದ ಅಂಗವಾಗಿ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಜನತೆಗೆ ಸಂಚಾರಿ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಲು ಬೃಹತ್ ಜಾಥಾ ಕೂಡ ಹಮ್ಮಿಕೊಳ್ಳಲಾಗಿತ್ತು.
ಅಶೋಕ್ ನೀಡಿರುವ ಪ್ರಮುಖ ಎಚ್ಚರಿಗೆಗಳು ವಾಹನ ಚಾಲಕರ ಗಮನಕ್ಕೆ.
* ಕುಡಿದು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ ಕೂಡಲೆ ಲೈಸೆನ್ಸ್ ರದ್ದು.
* ಮೂರು ಬಾರಿ ಅಪಘಾತ ಮಾಡಿದರೂ ಲೈಸೆನ್ಸ್ ರದ್ದು.
* ಮೊಬೈಲ್ ಬಳಸುತ್ತ ವಾಹನ ಓಡಿಸಿದರೂ ಲೈಸೆನ್ಸ್ ರದ್ದು.
* ರಿಕ್ಷಾ ಬಳಕೆದಾರರಿಂದ ದೂರುಗಳು ಬಂದರೆ ಚಾಲಕನ ವಿರುದ್ಧ ಕಠಿಣ ಕ್ರಮ.











Click it and Unblock the Notifications