15 ವರ್ಷದ ಹಿಂದಿನ ಚಿತ್ರ, ದಿಗ್ವಿಜಯ್ ಸಿಂಗ್ ಕಕ್ಕಾಬಿಕ್ಕಿ

ಈ ಚಿತ್ರವನ್ನು ಆರ್ ಎಸ್ ಎಸ್ ಬಿಡುಗಡೆಗೊಳಿಸಿ ಮಾತನಾಡಿದ ಸಂಘದ ವಕ್ತಾರ ರಾಮ್ ಮಾಧವ್, ದಿಗ್ವಿಜಯ್ ಸಿಂಗ್ ಒಬ್ಬ ಎಲುಬಿಲ್ಲದ ರಾಜಾಕಾರಿಣಿ. ಏನು ಮಾತನಾಡುತ್ತಿದ್ದೇನೆ ಎನ್ನುವ ಅರಿವಿಲ್ಲದೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ಪಕ್ಷ ನಂಬಿರುವ ಯಾವುದೇ ಸಿದ್ದಾಂತವನ್ನು ದಿಗ್ವಿಜಯ್ ಸಿಂಗ್ ಪಾಲಿಸುತ್ತಿಲ್ಲ, ಇದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ ಎಂದು ಟೀಕಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ದಿಗ್ವಿಜಯ್ ಸಿಂಗ್, ಮೊದಲು ಸಂಘ ಪರಿವಾರ ನನ್ನ ಹೊಗಳುತ್ತಿದೆಯೋ, ತೆಗಳುತ್ತಿದೆಯೋ ಎಂದು ಸ್ಪಷ್ಟ ಪಡಿಸಲಿ. ಬಿಜೆಪಿ ಮತ್ತು ಸಂಘ ಪರಿವಾರ ನನ್ನ ವಿರುದ್ದ ದಾಖಲೆಗಳನ್ನು ತೋರಿಸಲು ದೊಡ್ಡ ಸಂಶೋಧನೆ ನಡೆಸುತ್ತಿದೆ ಅದಕ್ಕೆ ಅವರಿಗೆ ಆಭಾರಿಯಾಗಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.
ಕಂಚಿ ಕಾಮಕೋಟಿ ಮಠ ಆಯೋಜಿಸಿದ್ದ ವಿರಾಟ್ ಹಿಂದೂ ಸಭೆಯಲ್ಲಿ ನಾನು ಭಾಗವಹಿಸಿದ್ದು ನಿಜ. ಕಾಂಗ್ರೆಸ್ ಪಕ್ಷದ ಅನುಮತಿ ಪಡೆದೆ ಇದರಲ್ಲಿ ಭಾಗವಹಿಸಿದ್ದೆ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications