ಬ್ಯಾಂಕ್ ಬಡ್ಡಿ ದರ, ತರಕಾರಿ ಬೆಲೆ ಶೀಘ್ರ ಇಳಿಕೆ ?

Inflation is negative
ನವದೆಹಲಿ, ಜ.6: ಹಣದುಬ್ಬರ ಇಳಿಕೆ ಹಿನ್ನೆಲೆಯಲ್ಲಿ ಆರ್‌ಬಿಐ ಬ್ಯಾಂಕ್‌ ಬಡ್ಡಿ ದರಗಳನ್ನು ಶೇ.1ರಷ್ಟು ಕಡಿತಗೊಳಿಸುವ ಸಾಧ್ಯತೆಯಿದೆ. 2012ರ ಆರಂಭದಲ್ಲಿ ವಾಹನ ಮತ್ತು ಗೃಹ ಸಾಲ ಪಡೆದ ಗ್ರಾಹಕರು ಸ್ವಲ್ಪ ನೆಮ್ಮದಿಯಿಂದ ಉಸಿರಾಡಬಹುದಾಗಿದೆ.

ಆರ್‌ಬಿಐ ವಿತ್ತ ಧೋರಣಾ ಪರಾಮರ್ಶೆ(Economic Advisory Council)ಯ ಸಮಯದಲ್ಲಿ ಬಡ್ಡಿ ದರ ಕಡಿತ ಮಾಡಬೇಕೆಂದು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಶಿಫಾರಸು ಮಾಡಿದೆ. ಬ್ಯಾಂಕರ್‌ಗಳು ಮತ್ತು ತಜ್ಞರು ಬಡ್ಡಿ ದರದಲ್ಲಿ ಶೇ. 1 ಕಡಿತವನ್ನು ನಿರೀಕ್ಷಿಸಿದ್ದಾರೆ.

ಆರ್‌ಬಿಐ ಅಂಕಿ ಅಂಶಗಳ ಪ್ರಕಾರ ವಾಣಿಜ್ಯ ಬ್ಯಾಂಕ್‌ಗಳ ಮೂಲ ದರ ಶೇ. 10ರಿಂದ 10.75ರ ವರೆಗೆ ವಿವಿಧ ಪ್ರಮಾಣದಲ್ಲಿದೆ.

ತರಕಾರಿ ಬೆಲೆ ಇಳಿಕೆ:
ಈರುಳ್ಳಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.73.74 ರಷ್ಟು ಕಡಿಮೆಯಾಗಲಿದೆ. ಆಲೂಗೆಡ್ಡೆ ಬೆಲೆ ಶೇ.34.01ರಷ್ಟು ಕೆಳಗಿಳಿಯಲಿದೆ. ಗೋಧಿ ಬೆಲೆ ಶೇ 3.41 ರಷ್ಟು ಹಾಗೂ ಎಲ್ಲಾ ತರಕಾರಿಗಳ ಬೆಲೆ ಶೇ 50.22 ರಷ್ಟು ಕಡಿಮೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.

ಆರ್‌ಬಿಐ ಮಾ. 2010ರಿಂದ 13 ಬಾರಿ ಪ್ರಮುಖ ದರಗಳನ್ನು ಹೆಚ್ಚಿಸಿದೆ. ಹಣದುಬ್ಬರ ನಿಯಂತ್ರಣಕ್ಕೆ ಬಂದರೆ, ಬಿಗು ಹಣಕಾಸು ನೀತಿಯ ತನ್ನ ಧೋರಣೆಯನ್ನು ಸಡಿಲಿಸುವ ಸೂಚನೆಯನ್ನು ಅದು ತನ್ನ ಡಿಸೆಂಬರ್‌ ಧೋರಣಾ ಪರಾಮರ್ಶೆ ವೇಳೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+