ಕೋಮುಗಲಭೆ ಸೃಷ್ಟಿಸಲು ಪಾಕ್ ಧ್ವಜ ಹಾರಿಸಿದರು!
ಸಿಂದಗಿ
(ಬಿಜಾಪುರ ಜಿಲ್ಲೆ), ಜ 5: ಪ್ರಶಾಂತವಾಗಿರುವ ವಾತಾವರಣವನ್ನು ಕದಡಲು, ಆ ಮೂಲಕ ಕೋಮು ಗಲಭೆ ಸೃಷ್ಟಿಸಲು ದುಷ್ಕರ್ಮಿಗಳು ಎಂತೆಂಥ ಹೀನಕೃತ್ಯಕ್ಕೆ ಕೈಹಾಕುತ್ತಾರೆ ಎಂಬುದು ಸಿಂದಗಿ ಧ್ವಜ ಪ್ರಕರಣದಿಂದ ಬಟಾಬಯಲಾಗಿದೆ. ಸಮಾಧಾನಕರ ಸಂಗತಿಯೆಂದರೆ ಜನ ಸಂಯಮ ತೋರಿ ಶಾಂತಿ ಮೆರೆದಿದ್ದರೆ ಪೊಲೀಸರು ಮೂರೇ ದಿನಗಳಲ್ಲಿ ಪ್ರಕರಣಕ್ಕೆ ಮಂಗಳ ಹಾಡಿದ್ದಾರೆ. id="toptextpromo">ಪೊಲೀಸರ
ಪ್ರಕಾರ ಪಟ್ಟಣದ ಶ್ರೀರಾಮಸೇನೆಯ ವಿದ್ಯಾರ್ಥಿ ಘಟಕದ ಕಾರ್ಯಕರ್ತರೆನ್ನಲಾದ ಆರು ಮಂದಿ ಇಂತಹ ದುಷ್ಟಾಲೋಚನೆ ಹೊಂದಿದ್ದರು. ಪೊಲೀಸರು ಹೇಳುವಂತೆ 'ಬಂಧಿತರು ಕೋಮುಗಲಭೆ ಸೃಷ್ಟಿಸಲು ಅತ್ಯಂತ ವ್ಯವಸ್ಥಿತವಾಗಿ ಮತ್ತು ಸಾವಧಾನವಾಗಿ ಪಾಕಿಸ್ತಾನದ ಧ್ವಜವನ್ನು ಹಾರಿಸಿದರು' ಎಂದು ತಿಳಿದು ಬಂದಿದೆ. id='are-slot-1' class='oiad oi-axt oiadv'> id='top-searched-articles'>ಈ
ಮದ್ಯೆ, 'ಬಂಧಿತ ಆರೋಪಿಗಳು ಈ ಕೃತ್ಯ ನಡೆಸಲು ಕಾರಣವೇನು? ಕೃತ್ಯದ ಹಿಂದೆ ಯಾರಿದ್ದಾರೆ? ಎಂಬುದರ ಕುರಿತು ತನಿಖೆ ಕೈಗೊಳ್ಳಲಾಗಿದೆ. ಕೋಮು ಸೌಹಾರ್ದತೆ ಕದಡುವ ಉದ್ದೇಶಕ್ಕಾಗಿ ಈ ಕೃತ್ಯ ನಡೆಸಿದ್ದಾರೆಯೇ? ಎಂಬುದರ ಬಗ್ಗೆಯೂ ವಿಚಾರಣೆ ಮಾಡಲಾಗುತ್ತಿದೆ' ಎಂದು ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ.ರಾಜಪ್ಪ ತಿಳಿಸಿದ್ದಾರೆ.











Click it and Unblock the Notifications