ತಂದೆ ಕಾರ್ಯ ಮುಗಿಯುತ್ತಿದ್ದಂತೆ ಮಧುಗೆ ಉತ್ತರಿಸುವೆ
ಕುಮಟಾ,
ಜ.4: ನಾಡಿನ ಹಿರಿಯ ರಾಜಕಾರಣಿ ಎಸ್. ಬಂಗಾರಪ್ಪ ಅವರ ಪುತ್ರರ ಕಲಹ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಸದ್ಯಕ್ಕೆ ಮಧು ಬಂಗಾರಪ್ಪ ಅವರ ಕೈ ಮೇಲಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿರುವಾಗಲೇ ಕುಮಾರ ಬಂಗಾರಪ್ಪ ಗುಡುಗಿದ್ದಾರೆ. ತಮ್ಮ ತಂದೆಯವರ ಎಲ್ಲ ಕಾರ್ಯಗಳು ಮುಗಿಯುತ್ತಿದ್ದಂತೆ ಮಧು ಮಾಡಿರುವ ಆರೋಪಗಳಿಗೆ ತಕ್ಕ ಉತ್ತರ ನೀಡುವುದಾಗಿ ಕುಮಾರ್ ಬಂಗಾರಪ್ಪ ಘೋಷಿಸಿದ್ದಾರೆ. id="toptextpromo">ಇಲ್ಲಿನ
ಕೋಟಿತೀರ್ಥದ ತಟಾಕದಲ್ಲಿ ಮಂಗಳವಾರ ಅವರು ವಿಧಿವತ್ತಾಗಿ ಬಂಗಾರಪ್ಪನವರ ಅಪರಕರ್ಮಗಳನ್ನು ನೆರವೇರಿಸಿದರು. ಬಳಿಕ, 'ತಂದೆಯ ನಿಧನಾನಂತರ ಹಿರಿಯ ಮಗನಾಗಿ ಕುಬಟೂರು ಗ್ರಾಮದ ಬಂಧುಗಳು, ಹಿರಿಯರ ಸಮ್ಮತಿಯಂತೆ ನಾನು ನನ್ನ ಕುಟುಂಬದವರೊಂದಿಗೆ ಎಲ್ಲ ಕ್ರಿಯಾವಿಧಿಗಳನ್ನು ಮಾಡುತ್ತಿದ್ದೇನೆ. ಬೆಂಗಳೂರಿನ ನಮ್ಮ ಮನೆಯಲ್ಲಿ ವೈಕುಂಠ ಸಮಾರಾಧನೆ ನಡೆಸುತ್ತೇವೆ' ಎಂದು ಸುದ್ದಿಗಾರರಿಗೆ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>'ಈ
ತಿಂಗಳ ಕೊನೆಯಲ್ಲಿ ಬಂಗಾರಪ್ಪನವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಸೊರಬದಲ್ಲಿಯೇ ನಡೆಸುತ್ತೇನೆ' ಎಂದು ಕುಮಾರ್ ಬಂಗಾರಪ್ಪ ಇದೇ ವೇಳೆ ಪ್ರಕಟಿಸಿದರು. ಕುಮಾರ್ ಬಂಗಾರಪ್ಪ ಅವರಿಗೆ ಬಂಧುಗಳಾದ ಅವರ ದೊಡ್ಡಮ್ಮ, ಚಿಕ್ಕಮ್ಮ ಪಂಕಜ ಮುಂತಾದವರು ಜತೆಗಿದ್ದರು.











Click it and Unblock the Notifications