ಮಧುಗೆ ಚುನಾವಣೆ ಗೆಲ್ಲುವ ಆಕಾಂಕ್ಷೆಯಿಂದ ನನಗೆ ಕಳಂಕ
ಕುಮಟಾ,
ಜ.4: ಮಾಜಿ ಸಚಿವ ಕುಮಾರ ಬಂಗಾರಪ್ಪ ಮಂಗಳವಾರ ಕುಮಟಾ ತಾಲ್ಲೂಕಿನ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಅಪರ ಕಾರ್ಯ ನೆರವೇರಿಸಿದರು. id="toptextpromo">ಬಳಿಕ
ಸುದ್ದಿಗಾರರೊಂದಿಗೆ ಮಾತನಾಡಿದ ವಸಂತ ಕುಮಾರ ಬಂಗಾರಪ್ಪ ಅವರು ನನ್ನ ತಮ್ಮ ಮಧು ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಏಕೈಕ ಉದ್ದೇಶದಿಂದ ನನ್ನ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನಿಡುತ್ತಿದ್ದಾನೆ. ಆ ಮೂಲಕ ನನ್ನ ವರ್ಚಸ್ಸಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾನೆ. ಅವರ ಎಲ್ಲ ಕುಹಕಗಳಿಗೂ ನೊಂದು ಹೃದಯದಲ್ಲೇ ದುಃಖ ಬಚ್ಚಿಟ್ಟುಕೊಂಡಿದ್ದೇನೆ' ಎಂದು ಕುಮಾರ್ ಅಲವತ್ತುಕೊಂಡರು. id='are-slot-1' class='oiad oi-axt oiadv'> id='top-searched-articles'>'ತಂದೆಯ
ಆತ್ಮಕ್ಕೆ ಶಾಂತಿ ಬಯಸಿ ನಾನು ಕೈಕೊಂಡ ಅಪರ ಕಾರ್ಯಗಳ ಬಗ್ಗೆ ನನಗೆ ತೃಪ್ತಿ ಉಂಟಾಗಿದೆ' ಎಂದು ಅವರು ಪತ್ರಕರ್ತರಿಗೆ ತಿಳಿಸಿದರು. ಕುಮಾರ ಬಂಗಾರಪ್ಪ ಅವರೊಂದಿಗೆ ಹೊಸನಗರ ಕ್ಷೇತ್ರದ ಮಾಜಿ ಶಾಸಕ ಡಾ. ನಾರಾಯಣಪ್ಪ, ಕುಮಟಾ ಮಾಜಿ ಶಾಸಕ ಕೆ.ಎಚ್. ಗೌಡ, ಮಾಜಿ ಶಾಸಕರುಗಳಾದ ವಿರೂಪಾಕ್ಷಪ್ಪ, ಸಿ.ವಿ. ಹುಲಿಮನೆ ಪಾಲ್ಗೊಂಡಿದ್ದರು.











Click it and Unblock the Notifications