ಜಗನ್ ಅಕ್ರಮ ಮತ್ತು ಸಂಡೂರು ಪವರ್ ಬೇನಾಮಿ ಕಂಪನಿ

ಅದು ಹೇಗೆಂದರೆ 2005ರ ಏಪ್ರಿಲ್ ನಿಂದ SPCL ವಿದ್ಯುತ್ ಉತ್ಪಾದಿಸಲಾರಂಭಿಸಿತ್ತು. ವಸ್ತುಸ್ಥಿತಿಯಲ್ಲಿ Sandur Power Company ಮೌಲ್ಯ ಅಂದಾಜು 150 ಕೋಟಿ ರುಪಾಯಿ. ಆದರೆ ಅದನ್ನು ತಮ್ಮ ಫ್ಯಾಮಿಲಿ ಆಡಿಟರ್ ಸಾಯಿ ರೆಡ್ಡಿ ಮೂಲಕ ಜಗನ್ 797 ಕೋಟಿ ರು. ಗೆ ಏರಿಸಿದ್ದಾರೆ. ಈ ಪ್ರಕರಣದಲ್ಲಿ ಹವಾಲಾ ಹಣ ಮಾರಿಷಸ್ ಗೆ ಪಲಾಯನವಾಗಿದೆ. ವೈಎಸ್ ರಾಜಶೇಖರ ರೆಡ್ಡಿ ಆಂಧ್ರದ ಮುಖ್ಯಮಂತ್ರಿಯಾದ ಮೇಲೆ ಅಂದರೆ 2004ರ ಏಪ್ರಿಲ್ ನಿಂದ ಈ ಮನಿ ಲಾಂಡ್ರಿಂಗ್ ಯಾವುದೇ ಎಗ್ಗಿಲ್ಲದೇ ನಡೆದಿದೆ ಎನ್ನುತ್ತಿದೆ ಸಿಬಿಐ ಮೂಲಗಳು.
2005ರ ಅಕ್ಟೋಬರಿನಿಂದ 2 ಡಿಸೆಂಬರ್ ವರೆಗೆ ಮಾರಿಷಸ್ ನ 2I capital ಮತ್ತು Pluri Emerging Company ಎಂಬ ಎರಡು ಕಂಪನಿಗಳಿಗೆ ಸುಮಾರು 25 ಕೋಟಿ ರು. ರವಾನೆಯಾಗಿದೆ ಎಂಬುದು ಸಿಬಿಐ ವಾದ. ಆದರೆ ಈ ಎರಡೂ ಕಂಪನಿಗಳು SEBIಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆ ಕಂಪನಿಗಳೆಂದು ನೋಂದಣಿಯೇ ಆಗಿಲ್ಲ.
ಮುಂದೆ, ರೆಡ್ಡಿ ಈ ಕಂಪನಿಗಳ ಷೇರುಗಳನ್ನು ಅತಿ ಅಗ್ಗದ ದರದಲ್ಲಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಅದಾಗುತ್ತಿದ್ದಂತೆ ಈ ಎರಡೂ ಕಂಪನಿಗಳ ಅಸ್ತಿತ್ವ ಮಂಗಮಾಯವಾಗಿವೆ ಎನ್ನುತ್ತಿದೆ ಸಿಬಿಐ. ಈ ಕಾಲದಲ್ಲಿ SPCLಗೆ ಆಡಿಟರ್ ಆಗಿದ್ದ ಸಾಯಿ ರೆಡ್ಡಿ ಆ ಸ್ಥಾನಕ್ಕೆ ರಾಜೀನಾಮೆ ಒಗಾಯಿಸಿ, 2005ರಲ್ಲಿ ಒಂದು ವರ್ಷ ಕಾಲ 2I capital ಪ್ರತಿನಿಧಿಸುತ್ತಾ SPCL ನಿರ್ದೇಶಕರಾಗಿ ನೇಮಕಗೊಂಡಿದ್ದರು.
ತದನಂತರ 2007-08ರಲ್ಲಿ ರಂಗ ಪ್ರವೇಶಿಸಿದ ಜಗನ್, SPCL ಷೇರುಗಳನ್ನು ಚೆನ್ನೈನ ಐದು ಬೇನಾಮಿ ಕಂಪನಿಗಳಿಗೆ ವರ್ಗಾಯಿಸಿ, ಆ ಹಣವನ್ನು ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ಈ ಅಕ್ರಮದಲ್ಲಿ 533 ಕೋಟಿ ರು. ಜಗನ್ ಖಾತೆಗೆ ವರ್ಗವಾಗಿದೆ ಎಂಬುದು ಗಮನಾರ್ಹ. ಇದರಲ್ಲಿ ನಿಮ್ಮಗಡ್ಡ ಪ್ರಸಾದ್ ಎಂಬ ಉದ್ಯಮಪತಿಯ ಹೆಸರೂ ಶಾಮೀಲಾಗಿದೆ ಎನ್ನುತ್ತದೆ ಸಿಬಿಐ.












Click it and Unblock the Notifications