ಬಿಜೆಪಿ, ಜೆಡಿಎಸ್ ನಡುವೆ ಮತ್ತೆ ರಾಜಕೀಯ ದೋಸ್ತಿ?

ಧನುರ್ಮಾಸ ( ಜನವರಿ 14) ಮುಗಿದ ನಂತರ ಯಡಿಯೂರಪ್ಪ ತನ್ನ ಮುಂದಿನ ರಾಜಕೀಯ ನಡೆ ನಿರ್ಧರಿಸುವುದಾಗಿ ಈಗಾಗಲೇ ಹೇಳಿಕೆ ನೀಡಿರುವುದರಿಂದ ಅವರಿಗೆ ಸೂಕ್ತ ತಿರುಗೇಟು ನೀಡಲು ಆಡಳಿತ ಬಿಜೆಪಿ ಈಗಾಗಲೇ ಸಜ್ಜಾಗಿದ್ದು ಅಗತ್ಯ ಬಿದ್ದಲ್ಲಿ ನಿಮ್ಮ ನೆರವು ಪಡೆದುಕೊಳ್ಳಲಾಗುವುದು ಎನ್ನುವ ಸಂದೇಶವನ್ನು ಎಚ್ ಡಿ ಕುಮಾರಸ್ವಾಮಿಗೆ ರವಾನಿಸಿದೆ ಎನ್ನಲಾಗಿದೆ.
ಈ ಸಂಬಂಧ ಬಿಜೆಪಿ ರಾಜ್ಯಾದ್ಯಕ್ಷ ಈಶ್ವರಪ್ಪ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಜೊತೆ ಒಂದು ಸುತ್ತಿನ ಮಾತುಕತೆ ಕೂಡಾ ಮುಗಿಸಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕುಮಾರಸ್ವಾಮಿ, ಯಡಿಯೂರಪ್ಪ ಜೊತೆ ಮೂವತ್ತಕ್ಕಿಂತ ಹೆಚ್ಚಿನ ಶಾಸಕರು ಹೋಗದಂತೆ ನೋಡಿಕೊಳ್ಳಿ ಎಂದು ಈಶ್ವರಪ್ಪಗೆ ಸಲಹೆ ನೀಡಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು.
ನವದೆಹಲಿಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ ಕೂಡಾ ಈ ಕುರಿತು ಚರ್ಚಿಸಿದ್ದಾರೆ. ದೇವೇಗೌಡರು ಕೂಡಾ ಸಿಎಂ ಮಾತಿಗೆ ಇಲ್ಲ ಎಂದಿಲ್ಲ ಎಂದು ಉದಯವಾಣಿ ಪತ್ರಿಕೆ ವರದಿ ಮಾಡಿದೆ.












Click it and Unblock the Notifications