ದೇಶಕ್ಕಾಗಿ ತ್ಯಾಗಕ್ಕೆ ಸಿದ್ಧರಾಗಲು ಅಣ್ಣಾ ಹಜಾರೆ ಕರೆ

ಈ ಮೂರು ದಿನಗಳ ಉಪವಾಸದ ತಯಾರಿಗಾಗಿ ಕಳೆದ ಮೂರು ದಿನಗಳಿಂದ ಉಪವಾಸವಿರುವ ಅಣ್ಣಾ ಹಜಾರೆ ಉಪವಾಸ ಕೈಬಿಡಬೇಕೆಂದು ಅಣ್ಣಾ ಟೀಂನ ಸದಸ್ಯರಿಂದ ಒತ್ತಡ ಬರುತ್ತಿದೆ. ಆದರೆ, ಅವರ ಆರೋಗ್ಯ ತಪಾಸಣೆ ಮಾಡುತ್ತಿರುವ ವೈದ್ಯರ ತಂಡ ಅವರು ಉಪವಾಸ ಮುಂದುವರಿಸಬಹುದೆಂದು ಅಭಯ ನೀಡಿದ್ದಾರೆ.
ಸುಮಾರು ಐದು ಸಾವಿರಕ್ಕೂ ಹೆಚ್ಚು ನೆರೆದಿರುವ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾ, ಹಿಂದಿ ಚಿತ್ರಗೀತೆಯ ಹಾಡು 'ದಿಲ್ ದಿಯಾ ಹೈ ಜಾನ್ ಭಿ ದೇಂಗೆ, ಅಯ್ ವತನ್ ತೇರೆ ಲಿಯೇ ಹೈ' ಪ್ರಸ್ತಾಪಿಸಿ ದೇಶಕ್ಕಾಗಿ ಹೃದಯವನ್ನೇ ಕೊಟ್ಟಿದ್ದೇನೆ, ಈಗ ಭಾರತಕ್ಕಾಗಿ ಪ್ರಾಣ ಕೊಡಲೂ ಸಿದ್ಧನಿದ್ದೇನೆ ಎಂದು ಹೇಳಿ ತಮ್ಮ ಮನೋಬಲ ಎಂತಹುದೆಂದು ಮತ್ತೆ ಸಾಬೀತು ಮಾಡಿದ್ದಾರೆ.
"ಕೇಂದ್ರ ಸರಕಾರ ನಮಗೆ (ದೇಶದ ಜನತೆಗೆ) ಮೋಸ ಮಾಡುತ್ತಿದೆ. ಇದರ ವಿರುದ್ಧ ಚುನಾವಣೆಯ ಕಣಕ್ಕಿಳಿದಿರುವ ಐದು ರಾಜ್ಯಗಳಲ್ಲಿ ಪ್ರಚಾರ ಮಾಡುತ್ತೇನೆ. ಇದು ತ್ಯಾಗ ಮಾಡುವ ಸಮಯ. ಭ್ರಷ್ಟಾಚಾರದ ವಿರುದ್ಧ ನಾವೆಲ್ಲ ಹೋರಾಡಲು ಸಿದ್ಧರಾಗಬೇಕು" ಎಂದು ಜ್ವರದಿಂದ ಬಳಲುತ್ತಿರುವ ಅಣ್ಣಾ ಹಜಾರೆ ಕರೆ ನೀಡಿದ್ದಾರೆ.
ದೇಶದಾದ್ಯಂತ ಅಣ್ಣಾ ಹಜಾರೆ ನಿರಶನಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಯುವಪಡೆ ಉಪವಾಸ ಕುಳಿತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷ ಆಡಳಿತ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಫೇಸ್‌ಬುಕ್‌ಗಳಲ್ಲಿ, ಟ್ವಿಟ್ಟರುಗಳಲ್ಲಿ ಅಣ್ಣಾ ಸತ್ಯಾಗ್ರಹ ಬೆಂಬಲಿಸಿ ಸಂದೇಶಗಳ ಸುನಾಮಿಯೇ ಹರಿದುಬಂದಿದೆ.












Click it and Unblock the Notifications