500 ರೂಪಾಯಿಯ ಹೊಸ ನೋಟು ನೋಡಿದ್ರಾ..
ಮುಂಬೈ,
ಡಿ 27: ರೂಪಾಯಿ 500 ರ ಹೊಸ ನೋಟನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದ್ಯದಲ್ಲೇ ಚಲಾವಣೆಗೆ ತರಲಿದೆ. ಈ ಹೊಸ ನೋಟಿನಲ್ಲಿರುವ ಒಂದೇ ಒಂದು ಬದಲಾವಣೆಯೆಂದರೆ ಇದರಲ್ಲಿ ರೂಪಾಯಿ ಚಿಹ್ನೆ ಹೊಂದಿರುತ್ತದೆ. id="toptextpromo">2005
ರಲ್ಲಿ ಪ್ರಕಟವಾದ ಶ್ರೇಣಿಯ ನೋಟುಗಳನ್ನೇ ಹೋಲುವ ಈ ನೋಟುಗಳ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಡಿ ಸುಬ್ಬರಾವ್ ಅವರ ಸಹಿ ಇರಲಿದ್ದು ಮುದ್ರಣವಾದ ವರ್ಷ ಕೂಡ ನಮೂದಿಸಲಾಗುತ್ತದೆ ಎಂದು ಬ್ಯಾಂಕ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಈ
ಹೊಸ ನೋಟು ಚಲಾವಣೆಗೆ ಬಂದ ನಂತರ ಹಳೆ 500 ರೂಪಾಯಿಯ ನೋಟು ಕೂಡಾ ಚಾಲ್ತಿಯಲ್ಲಿರುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಕಳೆದ ತಿಂಗಳು 1000 , 100 ಮತ್ತು 10 ರೂಪಾಯಿಯ ಹೊಸ ನೋಟನ್ನು ಚಲಾವಣೆಗೆ ತರಲಿದೆ ಎಂದು ಬ್ಯಾಂಕ್ ಪ್ರಕಟಿಸಿತ್ತು.











Click it and Unblock the Notifications