ಪುಲಿಕಾಟ್ ಕೆರೆ ಬೋಟ್ ದುರಂತ: 22 ಮಂದಿ ಜಲಸಮಾಧಿ
ಚೆನ್ನೈ,
ಡಿ. 26: ಸುನಾಮಿ ಭೀತಿಯ ಅಲೆಯಲ್ಲಿದ್ದ ಚೆನ್ನೈ ಮಂದಿಗೆ ಈ ಬಾರಿಯ ಕ್ರಿಸ್ ಮಸ್ ಸಹ ಮತ್ತೊಂದು ಆಘಾತ ತಂದಿದೆ. ಸಮುದ್ರದ ಹಿನ್ನೀರಿನಲ್ಲಿರುವ ಪುಲಿಕಾಟ್ ಕೆರೆಯಲ್ಲಿ ಕ್ರಿಸ್ಮಸ್ ರಜೆಯ ಮೋಜಿಗಾಗಿ ತೆರಳಿದ್ದ ಒಂದೇ ಕುಟುಂಬದ 22 ಮಂದಿ ಜಲಸಮಾಧಿಯಾಗಿದ್ದಾರೆ. ಚೆನ್ನೈನಿಂದ 60 ಕಿ.ಮೀ. ದೂರದ ತಿರುವಳ್ಳುರ್ ಜಿಲ್ಲೆಯಲ್ಲಿರುವ ಕೆರೆಯಲ್ಲಿ ಇಡೀ ಕುಟುಂಬ ಬೋಟ್ ವಿಹಾರದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ. id="toptextpromo">ಭಾನುವಾರ
ಬೆಳಗ್ಗೆ ಸುಂದರಪಾಂಡಿಯನ್ ಅಣ್ಣಾಚಿ ತಮ್ಮ ಮೊಮ್ಮಗನನ್ನು ಪವಿತ್ರಗೊಳಿಸಿದ ಸಂಬಂಧ (baptize) ಸಂಭ್ರಮಾಚರಣೆಗಾಗಿ ಬೋಟ್ ವಿಹಾರಕ್ಕೆ ತೆರಳಿದ್ದರು. ಬೋಟಿನ ಸಾಮರ್ಥ್ಯ 10 ಮಂದಿಯಷ್ಟಿತ್ತು. ಆದರೆ 25 ಮಂದಿಯ ಇಡೀ ಕುಟುಂಬ ಒಟ್ಟಿಗೇ ಸಾವಿನ ಮನೆಗೆ ಸಾಗಿದೆ. ಕುಟುಂಬದ ಯಜಮಾನ ಸುಂದರಪಾಂಡಿಯನ್ ಅಣ್ಣಾಚಿ ಸಹ ಮೃತರಾಘಿದ್ದು, ಇವರು ಗುಮ್ಮಿಡಿಪೊಂಡಿ ಬೈಪಾಸ್ ರಸ್ತೆಯಲ್ಲಿ ಹೋಟೆಲ್ ನಡೆಸುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಭಾನುವಾರ
ಮಧ್ಯಾಹ್ನ ಈ ದುರಂತ ಸಂಭವಿಸಿದೆ. ಬೋಟಿನಲ್ಲಿದ್ದ 25 ಮಂದಿಯ ಪೈಕಿ ಮೂವರು ಬಾಲಕರು ಮಾತ್ರ ಬದುಕುಳಿದಿದ್ದಾರೆ. ದುರಂತಕ್ಕೀಡಾದ ಬೋಟಿನ ಪಕ್ಕದಲ್ಲೇ ಮತ್ತೊಂದು ಬೋಟು ಸಾಗುತ್ತಿತ್ತು. ಅದರಲ್ಲಿದ್ದ ಅಶೋಕ್ ಎಂಬ ಬೆಸ್ತರ ಯುವಕ ಈ ಮಕ್ಕಳನ್ನು ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಬೆಳಗಿನ ಜಾವದ ವೇಳೆಗೆ ಹೆಣಗಳನ್ನು ನೀರಿನಿಂದ ಎತ್ತಲಾಗಿದೆ. ಮುಖ್ಯಮಂತ್ರಿ ಜೆ. ಜಯಲಲಿತಾ ಮೃತಪಟ್ಟ ಎಲ್ಲ 22 ಮಂದಿಗೆ ತಲಾ ಒಂದು ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.











Click it and Unblock the Notifications