ಕುಮಾರಣ್ಣ ಯುಪಿಎ ಸಂಪುಟಕ್ಕೆ ಸಿದ್ದು ಹಾಕಿದ್ದೆ ಅಡ್ಡಗಾಲು?

ಬೆಂಗಳೂರು, ಡಿ.25: ಕೇಂದ್ರದ ಯುಪಿಎ ಸರ್ಕಾರ ಸಂಪುಟದಲ್ಲಿ ಸ್ಥಾನ ಪಡೆಯಲು ಇನ್ನಿಲ್ಲದಂತೆ ಪ್ರಯತ್ನಿಸಿ ವಿಫಲರಾಗಿದ್ದ ಕುಮಾಎರಸ್ವಾಮಿ, ಆಸೆ ಮತ್ತೆ ಚಿಗುರೊಡೆಯುವ ಸಾಧ್ಯತೆಗಳಿತ್ತು. ಆದರೆ, ಅದಕ್ಕೆ ಕಲ್ಲು ಹಾಕಿದ್ದು ಯಾರು ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ನಾನಲ್ಲ ನಾನಲ್ಲ ಎಂದು ಉತ್ತರಿಸಿದ್ದಾರಂತೆ.

ಕುಮಾರಸ್ವಾಮಿ ಅವರನ್ನು ಕೇಂದ್ರದ ಮಂತ್ರಿ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಉದ್ಧಾರ ಮಾಡುವ ಪ್ಲ್ಯಾನ್ ಮಾಡಿ ಸಿದ್ದರಾಮಯ್ಯ, ಪರಮೇಶ್ವರ್ ಅವರಿಗೆ ಲಕೋಟೆಯಲ್ಲಿ ಸಂದೇಶ ಕಳಿಸಲಾಗಿತ್ತು ಎಂಬ ಕುಮಾರಸ್ವಾಮಿ ತಟಸ್ಥ ನಿಲುವಿನ ಹಿಂದಿನ ರಹಸ್ಯ ಸುದ್ದಿ ಓದಿರುತ್ತೀರಿ?

ಉತ್ತರಪ್ರದೇಶದ ಅಜಿತ್‌ಸಿಂಗ್‌, ಚಿರಂಜೀವಿ ಸೇರ್ಪಡೆ ಸುದ್ದಿ ಹಬ್ಬಿದ ತಕ್ಷಣ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹೈ ಕಮಾಂಡ್ ಭೇಟಿ ಮಾಡಿ ಬಂದಿದ್ದರು. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಜೊತೆ ಕೈ ಜೋಡಿಸುವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದು, ಇದಕ್ಕೆ ಹೈಕಮಾಂಡ್ ಒಪ್ಪಿದ್ದು ಎಲ್ಲವೂ ಸುಸೂತ್ರವಾಗಿ ಆಗಿತ್ತು.

ಆದರೆ, ಈ ಮೈತ್ರಿಗೆ ಬಿಲ್ ಕುಲ್ ಬೇಡ ಎಂದಿದ್ದು ಸಿದ್ದರಾಮಯ್ಯ ಎಂದು ತಿಳಿದು ಬಂದಿದೆ. ಕುಮಾರಸ್ವಾಮಿ ಜೊತೆ ಕೈ ಜೋಡಿಸಿದರೆ ಕಾಂಗ್ರೆಸ್ ಹೇಳ ಹೆಸರಿಲ್ಲದ್ದಂತೆ ಆಗುತ್ತದೆ. ಬಿಜೆಪಿ ಎಂದಿದ್ದರೂ ತಾನಾಗೇ ಬೀಳುವ ಮರ, ಇದಕ್ಕೆ ಜೆಡಿಎಸ್ ಸಹಕಾರ ಬೇಕಿಲ್ಲ.

ಜೆಡಿಎಸ್ ಜೊತೆ ಕೈ ಜೋಡಿಸಿದರೆ ನಾನು ಅಹಿಂದದ ಬಗ್ಗೆ ಮತ್ತೆ ಯೋಚಿಸಬೇಕಾಗುತ್ತದೆ ಎಂದು ಸಿದ್ದು ಗುಟುರು ಹಾಕಿದ್ದು, ಕಾಂಗ್ರೆಸ್ ನಾಯಕರಿಗೆ ತಟ್ಟಿದ ಪರಿಣಾಮ ಕುಮಾರಸ್ವಾಮಿಯ ಬಹು ದಿನದ ಕನಸು ಹಾಗೇ ಉಳಿಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+