ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದೇವೇಗೌಡ ಆಯ್ಕೆ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಹಾಗೂ ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಗುರುವಾರ ಪುರಸಭಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ಮಾಡಲಾಗಿದೆ.
ಮಾಜಿ ಪ್ರಧಾನಿಯನ್ನು ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷತೆಗೆ ಒಪ್ಪಿಸಿ ಕರೆತರುವ ಕೆಲಸವನ್ನು ದೇವೇಗೌಡರ ಅನುಯಾಯಿ ಹಾಗು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ ಮಲ್ಲೆಶ್ ಗೆ ವಹಿಸಲಾಗಿದೆ.
ಸಮ್ಮೇಳನಾಧ್ಯಕ್ಷರ ಆಯ್ಕೆ ಸಂಧರ್ಭದಲ್ಲಿ ಅಭಿಪ್ರಾಯಗಳನ್ನು ಕೋರಿದಾಗ ಬಹುತೇಕರು ಮಾಜಿ ಪ್ರದಾನಿ ದೇವೇಗೌಡರು ಕನ್ನಡಿಗರಾಗಿ ದೆಹಲಿಯಲ್ಲಿ ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ಕನ್ನಡ ಕೀರ್ತಿಪತಾಕೆಯನ್ನು ಎತ್ತಿ ಹಿಡಿದ್ದಿದ್ದಾರೆ ಆದ್ದರಿಂದ ಅವರನ್ನೆ ಸಮ್ಮೇಳನಾಧ್ಯಕ್ಷರನ್ನಾಗಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕು ಪಂಚಾಯ್ತಿ ಅಧ್ಯಕ್ಷ, ಜಿ.ಪಂ ಸದಸ್ಯ ಎಚ್ ಎಂ ದ್ಯಾವೇಗೌಡ, ಸರ್ಕಲ್ ಇನ್ಸ್ ಪೆಕ್ಟರ್ ಗೋಪಾಲನಾಯ್ಕ, ಜೆಡಿಎಸ್ ಅಧ್ಯಕ್ಷ ಗುರುಮಲ್ಲೇಶ ಮತ್ತಿತರರು ಎಚ್ ಡಿ ದೇವೇಗೌಡರೆ ಸಮ್ಮೇಳನಾದ್ಯಕ್ಷತೆಗೆ ಸೂಕ್ತವ್ಯಕ್ತಿ ಎಂದು ಅನುಮೋದಿಸಿದರು.
ಸಮ್ಮೇಳನಾಧ್ಯಕ್ಷ ಆಕಾಂಕ್ಷಿಗಳಾಗಿದ್ದ ಸಾಹಿತಿಗಳಾದ ಡಿಕೆ ಕುಮಾರಯ್ಯ, ಕೌಂಡಿನ್ಯ, ಬಂಗಾರಪ್ಪ, ಅನ್ನಾಜಪ್ಪ, ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರು ಮನಸಿಲ್ಲದ ಮನಸ್ಸಿನಿಂದ ದೇವೇಗೌಡರ ಆಯ್ಕೆಗೆ ಸಹಮತ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷರು ಮಾಜಿ ಪ್ರಧಾನಿಯಾಗಿರುವುದರಿಂದ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಉದಯರವಿ ಮಾತನಾಡಿ ಎಚ್ ಡಿ ದೇವೇಗೌಡ ಈ ದೇಶದ ಪ್ರಧಾನಿಯಾಗಿದ್ದ ವ್ಯಕ್ತಿ ಅಂತಹವರನ್ನು ತಾಲೂಕು ಮಟ್ಟದ ಸಮ್ಮೇಳನಾದ್ಯಕ್ಷರನ್ನಾಗಿ ಮಾಡಿರುವುದು ಕೆಳಮಟ್ಟಕ್ಕೆ ತರುವಂತಹುದಾಗಿದೆ
ಇದರಿಂದ ಅವರ ಮನಸಿಗೆ ಬೇಸರ ನೋವು ಉಂಟಾಗಬಹುದು ಇದು ನನ್ನ ವೈಯುಕ್ತಿಕ ಅಭಿಪ್ರಾಯ ಯೋಚಿಸಿ ತೀರ್ಮಾನಿಸಿ ಎಂದರು. ಆದರೆ ಸಭೆಯಲ್ಲಿ ದೇವೇಗೌಡರ ಹಿರಿಮೆಯನ್ನು ಕೊಂಡಾಗಿ ಅವರೇ ಸೂಕ್ತ ಎಂದು ಅಭಿಪ್ರಾಯಿಸಿ ನಿರ್ಣಯ ಕೈಗೊಳ್ಳಲಾಯಿತು.
ಇದೀಗ ಬಂದ ಸುದ್ದಿ: ಸಭೆಯ ನಿರ್ಣಯವನ್ನು ದೇವೇಗೌಡರ ಗಮನಕ್ಕೆ ತಂದಾಗ ಸಮ್ಮೇಳನಾಧ್ಯಕ್ಷತೆ ನನಗೆ ಬೇಡ ಬೇರೆ ಯಾರಿಗಾದರೂ ಅದನ್ನು ನೀಡಿ ನಾನು ಬೇಕಿದ್ದರೆ ಬಂದು ಸಮ್ಮೇಳನ ಉದ್ಘಾಟಿಸುತ್ತೇನೆ ಎಂದು ತಿಳಿಸಿದ್ದರ ಮೇರೆಗೆ ಮತ್ತೊಮ್ಮೆ ಶನಿವಾರ ರಾತ್ರಿ ಸಭೆ ನಡೆದು ಸಭೆಯಲ್ಲಿ ದೇವೇಗೌಡರ ಕುಟುಂಬಕ್ಕೆ ಸೇರಿದ ಚನ್ನಾಂಬಿಕ ಹೆಣ್ಣು ಮಕ್ಕಳ ಕಾಲೇಜು ಪ್ರಾಂಶುಪಾಲರಾಗಿರುವ ಡಾ ಕೆ ಸಿ ಮರಿಯಪ್ಪನವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಇವರು ಕೂಡಾ ಯಾವುದೇ ಸಾಹಿತ್ಯ ರಚನೆ ಮಾಡಿರುವ ಕುರುಹುಗಳು ಇಲ್ಲ ಆದಾಗ್ಯೂ ದೇವೇಗೌಡರ ಆಪ್ತ ವಲಯಕ್ಕೆ ಸೇರಿದವರಾಗಿರುವುದರಿಂದ ದೂರದ ಮಂಡ್ಯ ಜಿಲ್ಲೆಯವರನ್ನು ಹೊಳೆನರಸೀಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಮಾಡಿರುವ ಘೋಷಣೆ ಈಗಷ್ಟೆ ಹೊರಬಿದ್ದಿದೆ.












Click it and Unblock the Notifications