ಅಶ್ಲೀಲ ಎಂಎಂಎಸ್ : ವಿದ್ಯಾರ್ಥಿನಿಯ ಮರ್ಯಾದಾ ಹತ್ಯೆ
ಚೆನ್ನೈ,
ಡಿ. 24 : ಸಹಪಾಠಿಗಳೊಂದಿಗೆ ಅಶ್ಲೀಲ ಎಂಎಂಎಸ್ ಕ್ಲಿಪ್ಲಿಂಗ್‌ನಲ್ಲಿ ಕಾಣಿಸಿಕೊಂಡ ಹನ್ನೊಂದನೇ ತರಗತಿಯ ವಿದ್ಯಾರ್ಥಿನಿಯನ್ನು ಆಕೆಯ ಮನೆಯವರೇ ಕೊಂದು ಹಾಕಿರುವ ಘಟನೆ ತಮಿಳುನಾಡಿನ ಗುಮ್ಮಿಡಿಪೂಂಡಿಯಲ್ಲಿ ನಡೆದಿದೆ. ಮನೆಯವರ ಮೇಲೆ ಮರ್ಯಾದೆ ಹತ್ಯೆ ಮಾಡಿದ ಆರೋಪ ಹೊರಿಸಲಾಗಿದೆ. id="toptextpromo">ಆದರೆ,
ಅಶ್ಲೀಲ ವಿಡಿಯೋದಲ್ಲಿ ಕಾಣಿಸಿಕೊಂಡದ್ದು ಎಲ್ಲರಿಗೂ ತಿಳಿದ ನಂತರ ಮುಖ ತೋರಿಸಲಾಗದೆ ಕೆ. ತಿಲಗವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಮನೆಯವರು ಹೇಳುತ್ತಿದ್ದಾರೆ. ಪೋಸ್ಟ್ ಮಾರ್ಟಂನಲ್ಲಿ ವಿದ್ಯಾರ್ಥಿನಿ ಕತ್ತಿನ ಮೂಳೆ ಮುರಿದಿದ್ದು ಕಂಡುಬಂದಿರುವುದರಿಂದ ಇದು ಕೊಲೆ ಎಂದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಿಲಗವತಿ
ಇದ್ದ ಅಶ್ಲೀಲ ವಿಡಿಯೋ ತುಣುಕನ್ನು ಎಲ್ಲೆಡೆ ಹಂಚಿದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಶುಕ್ರವಾರ, ಡಿ.23ರಂದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆಯಲ್ಲಿ ಒಟ್ಟು ಐದು ವಿದ್ಯಾರ್ಥಿಗಳು ಮತ್ತು ತಿಲಗವತಿ ಸೇರಿದಂತೆ ಇಬ್ಬರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದಾರೆ. ತಿಲಗವತಿ ವಿದ್ಯಾರ್ಥಿಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದರೆ ಮತ್ತೊಬ್ಬ ಅದನ್ನು ವಿಡಿಯೋ ಮಾಡಿದ್ದ. ಈ ಘಟನೆ ನಡೆದ ಸಂದರ್ಭದಲ್ಲಿ ಸರಕಾರಿ ಶಾಲೆಯಲ್ಲಿ ಯಾರೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications