ವೇಶ್ಯಾವಾಟಿಕೆ: ದುಬೈಗೆ ಹಾರುತ್ತಿದ್ದ ಆರು ಯುವತಿಯರ ಸೆರೆ
ಮುಂಬೈ,
ಡಿ. 22: ದುಬೈನಲ್ಲಿ ವೇಶ್ಯಾವಾಟಿಕೆಗಾಗಿ ಹಾರುತ್ತಿದ್ದ 6 ಯುವತಿಯರನ್ನು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬುಧವಾರ ರಾತ್ರಿ ಬಂಧಿಸಿ, ರಕ್ಷಿಸಿದ್ದಾರೆ. ದಾಳಿ ವೇಳೆ ಷೇಕ್ ಷರೀಫ್ ಎಂಬ ಏಜೆಂಟ್ ನನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. id="toptextpromo">ಹೊಸ
ವರ್ಷದ ಸಂಭ್ರಮಾಚರಣೆಗಾಗಿ ಇವರನ್ನು ದುಬೈಗೆ ಕರೆದೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಸುಳಿವು ಪಡೆದ ಪೊಲೀಸರು ಏರ್ ಪೋರ್ಟಿಗೆ ಯುವತಿಯರು ಆಗಮಿಸುತ್ತಿದ್ದಂತೆ ದಾಳೆ ಮಾಡಿ, ವಶಕ್ಕೆ ತೆಗೆದುಕೊಂಡಿದ್ದಾರೆ. ಯುವತಿಯರು ಟೂರಿಸ್ಟ್ ವೀಸಾ ಹೊಂದಿದ್ದರು. id='are-slot-1' class='oiad oi-axt oiadv'> id='top-searched-articles'>ಈ
ವೇಶ್ಯಾವಾಟಿಕೆ ಜಾಲದಲ್ಲಿ ಭಾಗಿಯಾಗಿರುವ ಇತರೆ ಮೂವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಯುವತಿಯರು ರಾಜಸ್ಥಾನ ಮತ್ತು ಮಧ್ಯಪ್ರದೇಶದವರಾಗಿದ್ದು, ದುಬೈನಲ್ಲಿ ವೇಶ್ಯಾವಾಟಿಕೆ ಕೂಪಕ್ಕೆ ಇವರನ್ನು ತಳ್ಳುವ ಪ್ರಯತ್ನ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.











Click it and Unblock the Notifications